ETV Bharat / state

ಮದ್ದೂರಿನಲ್ಲಿ ಗಣೇಶನಿಗೆ ಕಡಲೆಕಾಯಿ ಅಲಂಕಾರ: ಜನರ ಗಮನ ಸೆಳೆದ ವಿನಾಯಕ - Ganesh festival in Madduru news

ಮದ್ದೂರಿನಲ್ಲಿ ನಂದಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಕಡಲೆಕಾಯಿಯಿಂದ ಅಲಂಕಾರ ಮಾಡಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಡಲೆಕಾಯಿಯಿಂದ ಗಣೇಶ ಹಾಗೂ ನಂದಿ ವಿಗ್ರಹಗಳನ್ನೂ ಅಲಂಕರಿಸಲಾಗಿತ್ತು.

ಮದ್ದೂರಿನಲ್ಲಿ ಗಣೇಶ ಚತುರ್ಥಿ
ಮದ್ದೂರಿನಲ್ಲಿ ಗಣೇಶ ಚತುರ್ಥಿ
author img

By

Published : Aug 22, 2020, 8:37 PM IST

ಮಂಡ್ಯ: ಕೊರೊನಾದಿಂದ ಈ ವರ್ಷದ ಗಣೇಶೋತ್ಸವ ಕಳೆಗುಂದಿದೆ. ಅದರೂ ಜಿಲ್ಲೆಯ ಕೆಲವು ಕಡೆ ವಿಶೇಷವಾಗಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ.

ಮದ್ದೂರಿನಲ್ಲಿ ಗಣೇಶನಿಗೆ ಕಡಲೆಕಾಯಿ ಅಲಂಕಾರ

ಮದ್ದೂರು ಪಟ್ಟಣದ ಬಸವೇಶ್ವರ ನಗರದ ನಂದಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಕಡಲೆಕಾಯಿ ಅಲಂಕಾರ ಮಾಡಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಡಲೆಕಾಯಿಯಿಂದ ಗಣೇಶ ಹಾಗೂ ನಂದಿ ವಿಗ್ರಹಗಳನ್ನೂ ಅಲಂಕಾರ ಮಾಡಲಾಗಿತ್ತು.

ಜೋಕಾಲಿ ಗಣೇಶ:

ಮದ್ದೂರು ತಾಲೂಕಿನ ಕರಟಕೆರೆ ಗ್ರಾಮದಲ್ಲಿ ಮಾರುತಿ ಯುವಕರ ಬಳಗದವರು ವಿಶಿಷ್ಟವಾಗಿ ಮೆಟಲ್ ಸ್ಟಾಂಡ್​ಗಳ ಮೂಲಕ ದಾರಿ ಮಧ್ಯೆ ಜೋಕಾಲಿಯಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ. ಇದು ಭಕ್ತರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.