ಮಂಡ್ಯ: ಚಲುವರಾಯಸ್ವಾಮಿ ಅವರು ಇತ್ತೀಚೆಗೆ ಸ್ವಲ್ಪ ಬಿಜೆಪಿ ಜೊತೆ ಹತ್ತಿರವಾಗಿದ್ದಾರೆ. ಬಿಜೆಪಿಯವರು ಇವಾಗ ಹೊಸ ಸಿಸ್ಟಮ್ ತಂದಿದ್ದಾರೆ. ಗೆಲ್ಲುವತನಕ ಸುಮ್ಮನಿರುತ್ತಾರೆ, ಗೆದ್ದಮೇಲೆ ಕೊಂಡುಕೊಳ್ಳುವ ಪದ್ಧತಿ ತಂದಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಟೀಕಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಕೊಟ್ಟಿರುವ ಹೇಳಿಕೆ ಸರಿಯಿದೆ. ಕರಡಹಳ್ಳಿ, ಹುಲಿಕೆರೆ, ಹರದಹಳ್ಳಿ, ಪಾಲಕಾರ, ಕಾಳಿಂಗನಹಳ್ಳಿ ಈ ಆರು ಪಂಚಾಯತ್ಗಳು ಜೆಡಿಎಸ್ನವು. ಬಿಜೆಪಿಯವರು ಗೆದ್ದಮೇಲೆ ಕೊಂಡುಕೊಳ್ಳುವ ಅಸ್ತ್ರ ಪ್ರಯೋಗಿಸಿ ಆರು ಪಂಚಾಯತ್ಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಕಾರಣ ನಾವಲ್ಲ. ಅಪ್ಪಾಜಿಗೌಡ, ಶ್ರೀಕಂಠೇಗೌಡ, ಸುರೇಶ್ ಗೌಡ ಒಗ್ಗಟ್ಟಾಗಿ ಚುನಾವಣೆ ಮಾಡಿದ್ದರು. ಈ ವೇಳೆ ಸುರೇಶ್ ಗೌಡರದು ಎಚ್‌ಎಎಲ್ ಚುನಾವಣೆ ಬಂತು. ಅವರು ಅಲ್ಲಿ ಬ್ಯುಸಿಯಾಗಿದ್ದರು. ನಾವು ಸುರೇಗೌಡರನ್ನ ಕರೆದ್ವಿ, ಆದರೆ ಅವರು ಚುನಾವಣೆ ಮುಗಿಸಿ ಬರುತ್ತೇನೆ ಅಂದರು. ಅಷ್ಟರಲ್ಲಿ ಕುದುರೆಗಳು ಹೊರಟೋಗಿದ್ದು, ವಾಸ್ತವ ವಿಚಾರವನ್ನ ಚಲುವರಾಯಸ್ವಾಮಿ ಹೇಳಿದ್ದಾರೆ ಎಂದರು.
ಓದಿ: ಮೈಸೂರು: ಟ್ರ್ಯಾಕ್ಟರ್ಗಳ ಮೇಲೆ ದಾಳಿ ಮಾಡಿದ ಒಂಟಿ ಸಲಗಕ್ಕೆ ದಂತ ಭಗ್ನ
ಗೆದ್ದಿರೋದು ನಮ್ಮದೆ ಜಾಸ್ತಿ ಅನ್ನುವುದನ್ನ ಹೇಳುತ್ತೇವೆ. ನಮ್ಮದು 21 ಗ್ರಾ.ಪಂ ಆಗಬೇಕಿತ್ತು, ಅವರದು 15 ಆಗಬೇಕಿತ್ತು. ಅವರದು 21 ಆಗಿದೆ, ನಮ್ಮದು 15 ಆಗಿದೆ ಇದು ಸತ್ಯವಾದ ಮಾತು ಎಂದರು.