ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರಿನ ಮೇಲೆ ಚಪ್ಪಲಿ ಎಸೆಯಲು ಬಿಜೆಪಿ ಪ್ರಾಯೋಜಿತ ಗೂಂಡಾಗಳಿಂದ ಕೃತ್ಯ ನಡೆಸುತ್ತಿರುವ ಅನುಮಾನ ಮೂಡಿದೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಭದ್ರತೆ ಕೊಡಲು ಸರ್ಕಾರ ವಿಫಲವಾಗಿದೆ. ಬಿಜೆಪಿ ಪ್ರಾಯೋಜಿತ ಗೂಂಡಾಗಳಿಂದ ಕೃತ್ಯ ನಡೆಸುತ್ತಿರುವ ಅನುಮಾನ ಮೂಡಿದೆ ಎಂದರು. ಸಿಡಿ ಪ್ರಕರಣದಲ್ಲಿ ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂಬ ಪ್ರಶ್ನೆ ಮೂಡ್ತಿದೆ. ಡಿ.ಕೆ. ಶಿವಕುಮಾರ್ ಮೇಲೆ ಗೂಬೆ ಕೂರಿಸುವ ಕೆಲಸ ಈ ಗೋಸುಂಬೆ ಸರ್ಕಾರ ಮಾಡುತ್ತಿದೆ. ಯಾವ ಪುಣ್ಯದ ಕೆಲಸ ಮುಂದಿಟ್ಟುಕೊಂಡು ಬಿಜೆಪಿ ದಮನಕಾರಿ ನೀತಿ ಅನುಸರಿಸುತ್ತಿದೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೀವು ಮಾಡಿರುವುದು ಪಾಪದ ಕೆಲಸವಾಗಿದೆ. ಡಿಕೆಶಿ ಅವರಿಗೆ ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಬೆಂಬಲ ಇದೆ. ಅವರ ವಿಚಾರಕ್ಕೆ ಬಂದರೆ ತೀವ್ರತರವಾದ ಪ್ರತಿಭಟನೆ ನಡೆಯಲಿದೆ. ತನಿಖೆಗೂ ಮೊದಲೆ ಡಿಕೆಶಿ ಅವರನ್ನ ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗ್ತಿದೆ ಎಂದು ಕಿಡಿಕಾರಿದರು.