ಮಂಡ್ಯ: ಹೆಲ್ತ್ ಸರ್ವಿಸ್ನ್ನು ರಾಷ್ಟ್ರೀಕರಣ ಅಥವಾ ಖಾಸಗೀಕರಣ ಮಾಡಿ ಎಂದು ಮಾಜಿ ಸಚಿವ ಎನ್. ಮಹೇಶ್ ಸರ್ಕಾರಕ್ಕೆ ಒತ್ತಾಯಿಸಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ರೆ ಹೆಲ್ತ್ ಸರ್ವಿಸ್ನ್ನು ರಾಷ್ಟ್ರೀಕರಣ ಮಾಡಿ. ಬಡವ, ಶ್ರೀಮಂತ ಎನ್ನದೆ ಎಲ್ಲರಿಗೂ ಉಚಿತವಾಗಿ ಸೇವೆ ನೀಡಿ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ನಾವು ಗುಂಪು ಗುಂಪಾಗಿ ಸೇರುವುದು ತಪ್ಪು. ಕೊರೊನಾ ಚೈನ್ ಕಟ್ ಮಾಡಬೇಕು ಅಂದ್ರೆ ಹೆಚ್ಚು ಜನ ಸೇರುವುದನ್ನ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಪ್ರತಿದಿನ ಕೋವಿಡ್ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟುತ್ತಿದೆ. ಕೊರೊನಾ ಮೊದಲ ಅಲೆ ಬಂದು ಹೋದ ಮೇಲೆ ಕಡಿಮೆಯಾಗಿತ್ತು. 2ನೇ ಅಲೆ ಬರುವಷ್ಟರಲ್ಲಿ ಸರ್ಕಾರ ಸಿದ್ಧತೆ ಮಾಡಿಕೊಂಡಿರಲಿಲ್ಲ. ಆದರೆ ಈಗ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್, ಐಸಿಯು ಕಾಯ್ದಿರಿಸಲು ಮುಂದಾಗಿದ್ದಾರೆ ಎಂದರು.
ಮತ್ತೆ ಲಾಕ್ ಡೌನ್ ವಿಚಾರವಾಗಿ ಮಾತನಾಡಿದ ಶಾಸಕ ಮಹೇಶ್, ನಮ್ಮ ರಾಜ್ಯಕ್ಕೆ ಲಾಕ್ ಡೌನ್ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ ಎಂದರು.