ಮಂಡ್ಯ: ಸ್ವಾಧೀನಕ್ಕೆ ಒಳಗಾದ ಭೂಮಿಯನ್ನು ರೈತರು ಇನ್ನೂ ಬಿಟ್ಟುಕೊಡದ ಕಾರಣ, ರಾಷ್ಟ್ರೀಯ ಹೆದ್ದಾರಿ 275ರ ವಿಸ್ತರಣೆ ಕಾಮಗಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕುಂಟುತ್ತಾ ಸಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಅಧಿಕಾರಿಗಳನ್ನೊಳಗೊಂಡ 6 ತಂಡವನ್ನು ರಚನೆ ಮಾಡಿದ್ದು, ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಇಂದಿನಿಂದಲೇ ಈ ತಂಡ ಅಖಾಡಕ್ಕೆ ಇಳಿಯಲಿದೆ.
ಮೊದಲ ತಂಡವಾದ ಮದ್ದೂರು ತಹಶೀಲ್ದಾರ್ ಗೀತಾ, ಸಿಪಿಐ ಮಹೇಶ್, ಮಹಾಲಿಂಗಪ್ಪ, ಹನುಮೇಗೌಡ, ಕೆ.ಎಲ್. ಮಹೇಶ್ ತಂಡ ಮದ್ದೂರು ಪಟ್ಟಣದಿಂದ ಗೆಜ್ಜಲಗೆರೆವರೆಗೆ ತೆರವು ಕಾರ್ಯಾಚರಣೆ ಮಾಡಲಿದೆ. ನಂತರ, ಎರಡನೇ ತಂಡವಾದ ಮಂಡ್ಯ ತಹಶೀಲ್ದಾರ್ ನಾಗೇಶ್, ಸಿಪಿಐ ನೇಮಿರಾಜು, ಕೆಂಗಣ್ಣ ಸ್ವಾಮಿ, ಪ್ರಭು ಮತ್ತು ಪಾರ್ವತಿಯವರ ತಂಡ ಗೆಜ್ಜಲಗೆರೆ ಗಡಿಯಿಂದ ಉಮ್ಮಡಹಳ್ಳಿ ಗೇಟ್ ವರೆಗೆ ಕಾರ್ಯಾಚರಣೆ ಮಾಡಲಿದೆ. ಇನ್ನು ಕೆ.ಆರ್.ಪೇಟೆ ತಹಶೀಲ್ದಾರ್ ಶಿವಮೂರ್ತಿ, ಉಪ ತಹಶೀಲ್ದಾರ್ ಉಮಾದೇವಿ, ನಾಗರಾಜು, ಎಸ್‌ಐ ಸಿದ್ದರಾಜು, ಗಿರೀಶ್ ಗೌಡ ಹಾಗೂ ಮಹೇಶ್ ಒಳಗೊಂಡ ಮೂರನೇ ತಂಡ ಉಮ್ಮಡಹಳ್ಳಿ ಗೇಟ್‌ನಿಂದ ವಿ.ಸಿ ಫಾರಂ ಗೇಟ್ವರೆಗೆ ಕಾರ್ಯಾಚರಣೆ ಮಾಡಲಿದೆ.
ಇನ್ನು, ನಾಲ್ಕನೇ ತಂಡವಾದ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ದೊರೆಸ್ವಾಮಿ, ನೇಮಿರಾಜು, ಸುಮನ್, ಧನಂಜಯ ಹಾಗೂ ಉಮೇಶ್ ತಂಡ ಇಂಡುವಾಳು ಗ್ರಾಮದಿಂದ ಯಲಿಯೂರು ಸರ್ಕಲ್ವರೆಗೂ ಹಾಗೂ ಐದನೇ ತಂಡವಾದ ಮಂಡ್ಯ ಉಪವಿಭಾಗಾಧಿಕಾರಿ ಶಿವಪ್ಪ, ಮೂಗೂರೇಗೌಡ, ರವಿ, ನಾಗೇಶ್ ಗೌಡ, ಸೋಮಶೇಖರ್ ಹಾಗೂ ವಿವೇಕ್ ತಂಡ ಯಲಿಯೂರ್ ಸರ್ಕಲ್‌ನಿಂದ ರಾಗಿಮುದ್ದನಹಳ್ಳಿ ಗೇಟ್ ವರೆಗೆ ಕಾರ್ಯಾಚರಣೆ ಮಾಡಲಿದೆ. ಇನ್ನುಳಿದಂತೆ ಆರನೇ ತಂಡ ಬೂದನೂರು ಗ್ರಾಮಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಿದ್ದು, ಆ ಮೂಲಕ ಕಾಮಗಾರಿಗೆ ವೇಗ ಕೊಡಲು ಮುಂದಾಗಿದೆ.