ETV Bharat / state

2023ಕ್ಕೆ ಕುಮಾರಣ್ಣ ಸಿಎಂ, ಮಾದಪ್ಪನ ಸನ್ನಿಧಿಗೆ ಶಾಸಕ ಅನ್ನದಾನಿ ಪಾದಯಾತ್ರೆ - hd kumaraswamy

ಕೊರೊನಾ ತಡೆಗಾಗಿ ಹರಕೆ ಮಾಡಿಕೊಂಡಿದ್ದ ಶಾಸಕ - ಸುಮಾರು 103 ಕೀ.ಮೀ ಪಾದಯತ್ರೆ - ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಡವರ ನಿರೀಕ್ಷೆ.

for-2023-kumaranna-cm-madappa-mla-annadani-padayatra
2023ಕ್ಕೆ ಕುಮಾರಣ್ಣ ಸಿಎಂ, ಮಾದಪ್ಪನ ಸನ್ನಿಧಿಗೆ ಶಾಸಕ ಅನ್ನದಾನಿ ಪಾದಯಾತ್ರೆ
author img

By

Published : Jan 28, 2023, 7:33 PM IST

Updated : Jan 28, 2023, 11:00 PM IST

2023ಕ್ಕೆ ಕುಮಾರಣ್ಣ ಸಿಎಂ, ಮಾದಪ್ಪನ ಸನ್ನಿಧಿಗೆ ಶಾಸಕ ಅನ್ನದಾನಿ ಪಾದಯಾತ್ರೆ

ಮಂಡ್ಯ: ಕೋವಿಡ್​ 19 ಸಂದರ್ಭದಲ್ಲಿ ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ದೇವರ ಬಳಿ ಹರಕೆ ಕಟ್ಟಿಕೊಂಡಿದ್ದ ಮಳವಳ್ಳಿ ಕ್ಷೇತ್ರದ ಶಾಸಕ ಡಾ ಕೆ ಅನ್ನದಾನಿ ಶನಿವಾರದಂದು ಹರಕೆ ತೀರಿಸಲು ಮಳವಳ್ಳಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಹೊರಟಿದ್ದಾರೆ. ಇನ್ನೂ ಮಳವಳ್ಳಿಯಿಂದ - ಮಾದಪ್ಪನ ಸನ್ನಿಧಿಗೆ ಸುಮಾರು 103 ಕಿ.ಮೀ ದೂರ ಇದ್ದು ಎರಡೂ ರಾತ್ರಿ, ಮೂರು ಹಗಲು ಪಾದಯಾತ್ರೆ ಇರುತ್ತದೆ ಎಂದು ಶಾಸಕರು ತಿಳಿಸಿದರು.

ಇನ್ನೂ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಕೆ ಅನ್ನದಾನಿ, ‘‘2019ರಲ್ಲಿ ಯಾವುದೇ ಮದ್ದು ಇಲ್ಲದ ಕೊರೊನಾ ಸಾಂಕ್ರಮಿಕ ರೋಗ ದೇಶದೆಲ್ಲಡೆ ಹರಡಿತ್ತು, ರೋಗದಿಂದ ಮುಕ್ತರಾಗಲು ಎಲ್ಲರೂ ದೇವರ ಮೊರೆ ಹೋಗಿದ್ದೆವು. ಎಲ್ಲಾ ಧರ್ಮದವರು ದೇವರಲ್ಲಿ ಪ್ರಾರ್ಥಸಿಕೊಂಡಿದ್ದರು. ಹಾಗೇ ನಾವು ಕೂಡ ನಮ್ಮ ಮಳವಳ್ಳಿ ತಾಲೂಕಿನ ಮಾದೇಶ್ವರ, ಮಂಟೆ ಸ್ವಾಮಿ, ಸಿದ್ದಪ್ಪಾಜಿ ಹೀಗೆ ಜಾನಪದ ದೇವರುಗಳ ಮೊರೆ ಹೋಗಿದ್ದೆವು. ನಾನು ಮಾದಪ್ಪನ ಮೊರೆ ಹೋಗಿ ಕೊರೊನಾ ತಡೆಗಾಗಿ ಹರಕೆ ಮಾಡಿಕೊಂಡಿದ್ದೆ’’,

ಅದಕ್ಕಾಗಿ ಈಗ ಹರಕೆ ತೀರಿಸಲು ಮಳವಳ್ಳಿಯಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯತ್ರೆ ಮಾಡುತ್ತಿದ್ದೇನೆ, ಮೂರು ಹಗಲು ಎರಡೂ ರಾತ್ರಿ ಪಾದಯಾತ್ರೆ ಇರುತ್ತದೆ. ಅಲ್ಲಿ ತಲುಪಿದ ನಂತರ ವಿಶೇಷ ಪೂಜೆ ಸಲ್ಲಿಸಿ ಹರಕೆ ಅರ್ಪಿಸುತ್ತೇವೆ ಎಂದು ಶಾಸಕ ಅನ್ನದಾನಿ ತಿಳಿಸಿದರು. ಶಾಸಕರ ಪಾದಯಾತ್ರೆಯಲ್ಲಿ ಜೆಡಿಎಸ್​ ಪಕ್ಷದ ಕಾರ್ಯಕರ್ತರು ಸಹ ಕೈ ಜೋಡಿಸಿ ಅವರ ಜೊತೆ ಹೆಜ್ಜೆ ಹಾಕಿದರು.

ಇದನ್ನೂ ಓದಿ: ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ, ನನಗೆ ಯಾವುದೇ ಭಯವಿಲ್ಲ: ಸಂಸದೆ ಸುಮಲತಾ ಅಂಬರೀಶ್​

2023ಕ್ಕೆ ಮತ್ತೆ ಕುಮಾರಣ್ಣ ಸಿಎಂ ಮಾದಪ್ಪನಿಗೆ ಹರಕೆ ಕಟ್ಟಿಕೊಂಡ ಶಾಸಕ: ‘‘ಮಾಜಿ ಮುಖ್ಯಮಂತ್ರಿಗಳು, ನಮ್ಮ ನಾಯಕರಾದಂತಹ ಹೆಚ್​ಡಿ ಕುಮಾರಸ್ವಾಮಿ ಅವರು ಬಡವರ ಪರವಾದಂತಹ ಯೋಜನೆಗಳನ್ನ ಜಾರಿಗೆ ತರಲು ಇಡೀ ರಾಜ್ಯದ್ಯಂತ ಪಂಚರತ್ನ ಯೋಜನೆಯಿಂದ ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಬಡವರ ಪಾಲಿನ ಯೋಜನೆಗಳು ಜಾರಿಯಾಗಲಿ ಮತ್ತು 2023ರ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದು ಈ ರಾಜ್ಯದ ಮುಖ್ಯಮಂತ್ರಿ ಆಗಲಿ, ಮತ್ತೋಂದು ಸಲ ಅಧಿಕಾರಕ್ಕೆ ಬಂದು ಬಡವರಿಗೆ ಮತ್ತು ಸಾಮಾನ್ಯ ಜನರಿಗೆ ನೆರವಾಗಲಿ ಎಂದು ಮತ್ತೇ ಹರಕೆ ಕಟ್ಟಿಕೊಂಡಿದ್ದೇನೆ’’ ಎಂದು ಶಾಸಕ ಅನ್ನದಾನಿ ತಿಳಿಸಿದರು.

ರಾಜ್ಯದಲ್ಲಿ ಜೆಡಿಎಸ್​ ಪಕ್ಷ ಅಧಿಕಾರಕ್ಕೆ ಬಂದು ಮತ್ತೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಮೇಲೆ ಪಾದಯತ್ರೆ ಮುಖಾಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತೇನೆ ಎಂದು ಹರೆಕೆ ಕಟ್ಟಿಕೊಂಡಿದ್ದೇನೆ, ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಬಡವರು ನಿರೀಕ್ಷೆ ಇಟ್ಟಿದ್ದಾರೆ, ಅದೇ ರೀತಿ ಆಗಲಿ ಎಂದು ಮಲೆ ಮಹದೇಶ್ವರನ ಬಳಿ ಬೇಡಿಕೋಳ್ಳುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್​​ನ ಪ್ರಜಾಧ್ವನಿ ಸಮಾವೇಶ.. ನಾಯಕರಿಗೆ ಅದ್ಧೂರಿ ಸ್ವಾಗತ

Last Updated : Jan 28, 2023, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.