ETV Bharat / state

ಮಂಡ್ಯ: ಐವರ ಭೀಕರ ಹತ್ಯೆ ನಡೆದ ಎರಡೇ ದಿನಗಳಲ್ಲಿ ಕೊಲೆಗಾತಿ ಅರೆಸ್ಟ್​ - Woman killed five of a family in mandya for her love

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್​ನಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪಾತಕಿ ಅರೆಸ್ಟ್​
ಕೊಲೆ ಪಾತಕಿ ಅರೆಸ್ಟ್​
author img

By

Published : Feb 9, 2022, 10:13 AM IST

Updated : Feb 9, 2022, 12:58 PM IST

ಮಂಡ್ಯ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಐದು ಜನರ ಕೊಲೆ ಪ್ರಕರಣವನ್ನು ಎರಡೇ ದಿನಗಳಲ್ಲಿ ಬಗೆಹರಿಸುವಲ್ಲಿ ಕೆ.ಆರ್.ಎಸ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಿಯಕರನ ಆಸೆಯಿಂದ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಹಂತಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಿ ಬಂಧಿತ ಆರೋಪಿ. ಈಕೆ ಕೆಆರ್‌ಎಸ್ ಗ್ರಾಮದ ಬಜಾರ್ ಲೈನ್ ನಿವಾಸಿ ಗಂಗರಾಮ್ ಪತ್ನಿ ಲಕ್ಷ್ಮಿ(30), ಮಕ್ಕಳಾದ ರಾಜ್ (12) ಕೋಸಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್(12) ಎಂಬುವರನ್ನು ಕೊಲೆ ಮಾಡಿದ್ದಾಳೆ.

ಆರೋಪಿ ಲಕ್ಷ್ಮಿ
ಆರೋಪಿ ಲಕ್ಷ್ಮಿ

ಕೊಲೆಯಾಗಿರುವ ಮಹಿಳೆಯ ಗಂಡ ಗಂಗಾರಾಮ್ ಜೊತೆ ಲಕ್ಷ್ಮಿ ಅನೈತಿಕ ಸಂಬಂಧ ಹೊಂದಿದ್ದಾಳೆ. ಹೀಗಾಗಿ, ಮಹಿಳೆ ಮತ್ತು ಮಕ್ಕಳನ್ನು ಕೊಂದರೆ ಗಂಗಾರಾಮ್ ಜೊತೆ ಸಂಸಾರ ಮಾಡಬಹುದು ಎಂಬ ಉದ್ದೇಶದಿಂದ ದುಷ್ಕೃತ್ಯ ಎಸಗಿದ್ದಾಳೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ಮಂಡ್ಯ : ಹತ್ಯೆಯಾಗಿದ್ದ ಐವರ ಸಾಮೂಹಿಕ ಅಂತ್ಯಕ್ರಿಯೆ..

ಕೊಲೆಯಾದ ಮಹಿಳೆ ಲಕ್ಷ್ಮಿ ಮನೆಯಲ್ಲೇ ಇದ್ದಳು. ಅವರ ಜೊತೆಯೇ ರಾತ್ರಿ ಊಟ ಮಾಡಿ ಮಲಗಿದ್ದು ಬೆಳಗಾಗುವುದರೊಳಗೆ ಐವರನ್ನು ಕೊಂದು ಏನೂ ಗೊತ್ತಿಲ್ಲದ ರೀತಿ ನಾಟಕವಾಡಿದ್ದಾಳೆ. ಹಂತಕಿಯ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.

ಗಂಗರಾಮ್ ಕುಟುಂಬ

Last Updated : Feb 9, 2022, 12:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.