ಮಂಡ್ಯ: ಚುನಾವಣಾ ವೆಚ್ಚಕ್ಕಾಗಿ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಹಾಗೂ ಸಚಿವ ಸಿ.ಎಸ್.ಪುಟ್ಟರಾಜು ವಿರುದ್ಧ ಪ್ರಕರಣ ದಾಖಲಾಗಿದೆ. ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಎಫ್‌ಐಆರ್ ದಾಖಲು ಮಾಡಿದ್ದಾರೆ.
ಚುನಾವಣಾಧಿಕಾರಿ ಜಗದೀಶ್ ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಐಪಿಸಿ ಸೆಕ್ಷನ್ 171(E)ರ ಅಡಿಯಲ್ಲಿ ಕೇಸ್ ಹಾಕಲಾಗಿದೆ. ಎಫ್‌ಐಆರ್ ದಾಖಲಿಸಿ, ಚುನಾವಣಾ ಆಯೋಗಕ್ಕೆ ಪೊಲೀಸರು ಪ್ರಕರಣ ವರ್ಗಾಯಿಸಿದ್ದಾರೆ.
ಡಾ.ಜಿ.ಮಾದೇಗೌಡ, ಮಂಡ್ಯದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಕಾವೇರಿ ಹೋರಾಟದಲ್ಲಿ ಮುಂದಾಳತ್ವವಹಿಸಿದ್ದರು. ಈ ನಡುವೆ ಸಚಿವ ಪುಟ್ಟರಾಜು ಜೊತೆ ಮಾದೇಗೌಡರು ನಡೆಸಿರುವ ಆಡಿಯೋ ವೈರಲ್ ಆಗಿತ್ತು. ಸಚಿವರಿಗೆ ಕರೆ ಮಾಡಿ, ಹಣದ ಬೇಡಿಕೆ ಇಟ್ಟಿದ್ದ ಮಾದೇಗೌಡರ ಬೇಡಿಕೆಗೆ ಒಪ್ಪಿ ಹಣ ಕೊಡುವ ಭರವಸೆಯನ್ನೂ ಸಚಿವರು ನೀಡಿದ್ದರು. ಈ ಘಟನೆ ಕುರಿತಾಗಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.