ETV Bharat / state

ಶ್ರೀರಂಗಪಟ್ಟಣ: ಗ್ರಾಮಕ್ಕೆ ನುಗ್ಗಿ ತಾನು ಕೊರೊನಾ ಸೋಂಕಿತ ಎಂದು ಅಪರಿಚಿತ ವ್ಯಕ್ತಿಯ ಪುಂಡಾಟ!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ಕೊರೊನಾ ಸೋಂಕಿತ ಎಂದು ವ್ಯಕ್ತಿಯೊಬ್ಬ ಗ್ರಾಮಸ್ಥರಿಗೆ ಕಿರಿಕಿರಿ ಉಂಟು ಮಾಡಿದ್ದಾನೆ. ಇದರಿಂದ ಬೇಸತ್ತ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

Fear among villagers from unknown person
ಗ್ರಾಮಕ್ಕೆ ನುಗ್ಗಿ ಕೊರೊನಾ ಭಯ ಹುಟ್ಟಿಸಿದ ಅಪರಿಚಿತ ವ್ಯಕ್ತಿ
author img

By

Published : Apr 9, 2020, 12:04 AM IST

ಮಂಡ್ಯ: ಕೊರೊನಾ ಸೋಂಕಿತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಗ್ರಾಮದಲ್ಲಿ ಪುಂಡಾಟ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ನಡೆದಿದೆ.

Fear among villagers from unknown person
ಗ್ರಾಮಕ್ಕೆ ನುಗ್ಗಿ ಕೊರೊನಾ ಭಯ ಹುಟ್ಟಿಸಿದ ಅಪರಿಚಿತ ವ್ಯಕ್ತಿ

ಅಪರಿಚಿತ ವ್ಯಕ್ತಿ ‌ಗ್ರಾಮದಲ್ಲಿ ಉಗುಳುವುದು, ಪದಾರ್ಥಗಳನ್ನು ಮುಟ್ಟುವುದು ಮಾಡಿದ್ದಾನೆ. ಇಷ್ಟೇ ಅಲ್ಲದೇ ಜನರನ್ನು ಮುಟ್ಟುವುದು, ಅಪ್ಪಿಕೊಳ್ಳುವ ಯತ್ನ ಮಾಡಿದ್ದಾನೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ವ್ಯಕ್ತಿಯ ವಿಚಿತ್ರ ವರ್ತನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುಟ್ಟಲು ಬರುತ್ತಿದ್ದ ವ್ಯಕ್ತಿಯಿಂದ ತಪ್ಪಿಸಿಕೊಂಡ ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿದ್ದಾರೆ.

ಕಡೆಗೆ ವ್ಯಕ್ತಿಯ ಪುಂಡಾಟಕ್ಕೆ ಬೇಸತ್ತ ಗ್ರಾಮಸ್ಥರು ಕಟ್ಟಿಗೆ ಹಿಡಿದು ಹೊಡೆಯಲು ಮುಂದಾಗಿದ್ದಾರೆ. ಇದಕ್ಕೆ ಬೆದರದ ವ್ಯಕ್ತಿ ಒಂದು ಸ್ಥಳದಲ್ಲಿ ಕುಳಿತುಕೊಂಡಿದ್ದಾನೆ. ನಂತರ ಪೊಲೀಸರಿಗೆ ಕರೆ ಮಾಡಿ ಸ್ಥಳೀಯರು ವಿಚಾರ ಮುಟ್ಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.