ETV Bharat / state

ಮಂಡ್ಯದಲ್ಲಿ ಯುವಕರನ್ನು ಸೆಳೆಯಲು ಮುಂದಾದ ರೈತ ಸಂಘ.. - ಮಂಡ್ಯ

ಜಿಲ್ಲಾ ರೈತ ಸಂಘದ ಬಲವರ್ಧನೆ ಹಾಗೂ ರೈತರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ರೈತ ಸಂಘ ನಿರ್ಧಾರ ಮಾಡಿದ್ದು, ಇದಕ್ಕಾಗಿ ಜಿಲ್ಲೆಯಾದ್ಯಂತ ಶಿಬಿರಗಳನ್ನು ನಡೆಸಿ ಯುವಕರನ್ನು ಸೆಳೆಯಲು ಮುಂದಾಗಿದೆ.

ರೈತ ಸಂಘದ ಸಭೆ
author img

By

Published : Jul 13, 2019, 5:15 PM IST

ಮಂಡ್ಯ : ಜಿಲ್ಲಾ ರೈತ ಸಂಘದ ಬಲವರ್ಧನೆ ಹಾಗೂ ರೈತರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ರೈತ ಸಂಘ ನಿರ್ಧಾರ ಮಾಡಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಶಿಬಿರಗಳನ್ನು ನಡೆಸಿ ಯುವಕರನ್ನು ಸೆಳೆಯಲು ರೈತ ಸಂಘ ಮುಂದಾಗಿದೆ.

ಯುವಕರನ್ನು ಸೆಳೆಯಲು ಮುಂದಾದ ರೈತ ಸಂಘ..

ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿದ ರೈತ ಸಂಘದ ಪ್ರಮುಖರು, ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮುಖಂಡರಾದ ದರ್ಶನ್ ಪುಟ್ಟಣ್ಣಯ್ಯ, ಸುರೇಶ್, ಬೊಮ್ಮೇಗೌಡ, ಕೆಂಪುಗೌಡ, ತಮ್ಮಯ್ಯ ಸೇರಿದಂತೆ ಹಲವು ಪ್ರಮುಖರು ಸಭೆ ಮಾಡಿ ನಿರ್ಧಾರ ತೆಗೆದುಕೊಂಡರು.

ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ನಾಲೆಗಳಿಗೆ ನೀರು ಬಿಡುವಂತೆ ಮನವಿ ಸಲ್ಲಿಸುವುದು ಹಾಗೂ ಜಿಲ್ಲೆಯಾದ್ಯಂತ ರಸ್ತೆ ತಡೆ ಚಳವಳಿ ಮುಂದುವರಿಸಲು ನಿರ್ಧಾರ ಮಾಡಲಾಯಿತು. ಮೈಶುಗರ್ ಹಾಗೂ ಪಿಎಸ್ಎಸ್‌ಕೆ ಪ್ರಾರಂಭ ಮಾಡಬೇಕು. ಪ್ರಾರಂಭ ಮಾಡುವ ತನಕ ಕಟಾವಿಗೆ ಬಂದಿರುವ ಕಬ್ಬನ್ನು ಬೇರೆ ಕಂಪನಿಗಳಿಗೆ ಸಾಗಿಸಲು ಜಿಲ್ಲಾಧಿಕಾರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಲು ಇದೇ ವೇಳೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

Intro:ಮಂಡ್ಯ: ಜಿಲ್ಲಾ ರೈತ ಸಂಘದ ಬಲ ವರ್ಧನೆ ಹಾಗೂ ರೈತರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ರೈತ ಸಂಘ ನಿರ್ಧಾರ ಮಾಡಿದ್ದು, ಇದಕ್ಕಾಗಿ ಜಿಲ್ಲಾಧ್ಯಂತ ಶಿಬಿರಗಳನ್ನು ನಡೆಸಿ ಯುವಕರನ್ನು ಸೆಳೆಯಲು ಮುಂದಾಗಿದೆ.
ಇಂದು ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿದ ರೈತ ಪ್ರಮುಖರು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮುಖಂಡರಾದ ದರ್ಶನ್ ಪುಟ್ಟಣ್ಣಯ್ಯ, ಸುರೇಶ್, ಬೊಮ್ಮೇಗೌಡ, ಕೆಂಪೂಗೌಡ, ತಮ್ಮಯ್ಯ ಸೇರಿದಂತೆ ಹಲವು ಪ್ರಮುಖರು ಸಭೆ ಮಾಡಿ ನಿರ್ಧಾರ ತೆಗೆದುಕೊಂಡರು.
ಸೋಮವಾರ ಜಿಲ್ಲಾಧಿಕಾರಿ ಭೇಟಿ ಮಾಡಿ ನಾಲೆಗಳಿಗೆ ನೀರು ಬಿಡುವಂತೆ ಮನವಿ ಸಲ್ಲಿಸುವುದು ಜೊತೆಗೆ ಜಿಲ್ಲಾದ್ಯಂತ ರಸ್ತೆ ತಡೆ ಚಳವಳಿ ಮುಂದುವರಿಸಲು ನಿರ್ಧಾರ ಮಾಡಲಾಯಿತು.
ಇನ್ನು ಮೈಶುಗರ್ ಹಾಗೂ ಪಿಎಸ್ಎಸ್‌ಕೆ ಪ್ರಾರಂಭ ಮಾಡಬೇಕು, ಅಷ್ಟರಲ್ಲಿ ಕಟಾವಿಗೆ ಬಂದಿರುವ ಕಬ್ಬನ್ನು ಬೇರೆ ಕಂಪನಿಗಳಿಗೆ ಸಾಗಿಸಲು ಜಿಲ್ಲಾಧಿಕಾರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಲು ಸಭೆ ನಿರ್ಧಾರ ಮಾಡಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.