ಮಂಡ್ಯ: ಮೂರು ದಿನಗಳ ಅಂತರದಲ್ಲಿ ಮತ್ತೊಂದು ಗಂಡಾನೆ ವಿದ್ಯುತ್ ಸ್ಪರ್ಶಕ್ಕೆ ಬಲಿಯಾದ ಘಟನೆ ಮಳವಳ್ಳಿ ತಾಲೂಕಿನ ಎಚ್. ಬಸಾಪುರ ಗ್ರಾಮದ ಜಮೀನಿನಲ್ಲಿ ನಡೆದಿದೆ.
ವಿದ್ಯುತ್ ಸ್ಪರ್ಶದಿಂದ ಆರು ವರ್ಷದ ಗಂಡಾನೆ ಸಾವಿಗೀಡಾಗಿದ್ದು, ಕಿರಣ್ ಎಂಬುವವರ ಜಮೀನಿನಲ್ಲಿ ಆನೆ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಳೆದ ಶುಕ್ರವಾರವಷ್ಟೇ ಡಿ ಹಲಸಹಳ್ಳಿ ಬಳಿಯ ಜಮೀನಿನಲ್ಲಿ ನಾಲ್ಕು ವರ್ಷದ ಗಂಡಾನೆ ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿತ್ತು.
ಮಳವಳ್ಳಿ: ಬೆಳೆ ರಕ್ಷಣೆಗೆ ಹಾಕಲಾಗಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಕಾಡಾನೆ ಸಾವು
ಬೆಳೆ ರಕ್ಷಣೆಗೆ ರೈತರು ಹಾಕಿರುವ ವಿದ್ಯುತ್ ಬೇಲಿಗೆ ಆನೆಗಳು ಬಲಿಯಾಗುತ್ತಿವೆ. ಈ ಘಟನೆ ಪರಿಸರ ವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡು ರೈತನನ್ನು ವಶಕ್ಕೆ ಪಡೆದಿದ್ದಾರೆ.