ETV Bharat / state

ಸಕಲೇಶಪುರದಲ್ಲಿ ರೈಲು ಡಿಕ್ಕಿ ಹೊಡೆದು ಕಾಡಾನೆ ಸಾವು - ಕಾಡಾನೆ ಸಾವು

ರೈಲಿಗೆ ಸಿಲುಕಿ ಕಾಡಾನೆಯೊಂದು ಮೃತಪಟ್ಟ ಘಟನೆ ಸಕಲೇಶಪುರದಲ್ಲಿ ನಡೆದಿದೆ.

Elephant died
ರೈಲಿಗೆ ಡಿಕ್ಕಿ ಹೊಡೆದು ಕಾಡಾನೆ ಸಾವು
author img

By

Published : May 19, 2021, 7:26 AM IST

ಸಕಲೇಶಪುರ: ತಾಲೂಕಿನ ಹಲಸುಲಿಗೆ ಗ್ರಾ.ಪಂ ವ್ಯಾಪ್ತಿಯ ಹಸಿಡೆ ಗ್ರಾಮದಲ್ಲಿ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡಾನೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ಮಂಗಳವಾರ ರಾತ್ರಿ ನಡೆದಿದೆ.

ರೈಲು ಡಿಕ್ಕಿ ಹೊಡೆದು ಕಾಡಾನೆ ಸಾವು

ಬೆಂಗಳೂರಿನಿಂದ ಕಾರವಾರಕ್ಕೆ ಹೋಗುತ್ತಿದ್ದ ಬೆಂಗಳೂರು-ಕಾರವಾರ ಎಕ್ಸ್​ಪ್ರೆಸ್ ರೈಲಿಗೆ ಆನೆ ಅಡ್ಡ ಬಂದ ಪರಿಣಾಮ ಈ ದುಘರ್ಟನೆ ನಡೆದಿದೆ ಎನ್ನಲಾಗ್ತಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಕಾಡಾನೆ ಕಳೇಬರವನ್ನು ರೈಲು ಹಳಿಯ ಪಕ್ಕಕ್ಕೆ ಸರಿಸಲಾಯಿತು. ಇದರಿಂದ ರೈಲು ಸಂಚಾರ ಅರ್ಧ ಗಂಟೆ ವಿಳಂಬಗೊಂಡಿತ್ತು.

ಪದೇ ಪದೇ ರೈಲು ಹಳಿಯನ್ನು ದಾಟಲು ಹೋಗಿ ಕಾಡಾನೆಗಳು ಸಾವಿಗೀಡಾಗುವುದು ಸಾಮಾನ್ಯವಾಗಿದೆ. ಅರಣ್ಯ ಇಲಾಖೆ ರೈಲು ಹಳಿಗಳ ಪಕ್ಕ ಬ್ಯಾರಿಕೇಡ್​​ ನಿರ್ಮಾಣ ಮಾಡಲು ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.