ಮಂಡ್ಯ: ನಟರ ವಿರುದ್ಧ ಸಮರ ಸಾರಿದ್ದ ಕೆ.ಆರ್. ಪೇಟೆ ಜೆಡಿಎಸ್ ಶಾಸಕ ಕೆ.ಸಿ. ನಾರಾಯಣಗೌಡರಿಗೆ ಮುಖಭಂಗವಾಗಿದೆ. ಶಾಸಕರ ಎದುರು ದರ್ಶನ್ ಅಭಿಮಾನಿಗಳು ಡಿ ಬಾಸ್ ಪರ ಘೋಷಣೆ ಕೂಗಿದ್ದರಿಂದ ಶಾಸಕರಿಗೆ ಇರಿಸು ಮುರಿಸು ಉಂಟಾಗಿದೆ.
ಕೆ.ಆರ್. ಪೇಟೆ ತಾಲೂಕಿನ ಮಡುವಿನ ಕೋಡಿ ಗ್ರಾಮದ ಆಂಜನೇಯಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ನಾರಾಯಣಗೌಡರ ಎದುರು ಡಿ ಬಾಸ್ ಎಂದು ಘೋಷಣೆ ಕೂಗಿ, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಘೋಷಣೆಯಿಂದ ಮುಜುಗರಕ್ಕೊಳಗಾದ ಶಾಸಕ ಯಾವುದೇ ಪ್ರತಿಕ್ರಿಯೆ ನೀಡದೆ ಹೊರ ನಡೆದರು ಎಂದು ಎಂದು ತಿಳಿದುಬಂದಿದೆ.
ಬುಧವಾರ ಶಾಸಕ ನಾರಾಯಣಗೌಡ ಅವರು ನಟರಾದ ದರ್ಶನ್ ಮತ್ತು ಯಶ್ ಅವರನ್ನು ಉದ್ದೇಶಿಸಿ ಮಾತನಾಡುವಾಗ ಸರ್ಕಾರ ನಮ್ಮದಿದೆ, ನಿಮ್ಮ ಮೇಲೆ ವಿಚಾರಣೆ ನಡೆಸಬೇಕಾಗುತ್ತೆ. ನಿಮ್ಮ ಕೆಲಸ ಮಾಡಿಕೊಂಡು ಗೌರವದಿಂದ ಇರಿ ಎಂದು ಎಚ್ಚರಿಸಿದ್ದರು. ಇದರಿಂದ ಕೆರಳಿರುವ ಡಿ ಬಾಸ್ ಹಾಗೂ ಯಶ್ ಅಭಿಮಾನಿಗಳು ಶಾಸಕರ ಕಾರ್ಯಕ್ರಮಗಳಲ್ಲಿ ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗ್ತಿದೆ. ಒಟ್ಟಾರೆ ಶಾಸಕ ನಾರಾಯಣಗೌಡ ಜಾತ್ರೆಯಲ್ಲಿ ಮುಜುಗರ ಅನುಭವಿಸುಂತಾಯಿತು.