ETV Bharat / state

ಆನೆ ಕಾರ್ಯಾಚರಣೆ ವೇಳೆ ತಾಗಿದ ಗುಂಡು... ಅರಣ್ಯ ಇಲಾಖೆ ಸಿಬ್ಬಂದಿ ಸಾವು - Forest Department contract employee death

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದ ಹೊರವಲಯದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಗುಂಡೇಟಿಗೆ ಬಲಿಯಾಗಿದ್ದಾನೆ.

Death of Forest Department contract employee in mandya
ಗುಂಡೇಟಿಗೆ ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಬಲಿ..ಆನೆ ಕಾರ್ಯಾಚರಣೆ ವೇಳೆ ಅವಘಡ
author img

By

Published : Aug 6, 2020, 10:55 PM IST

ಮಂಡ್ಯ: ರೈತರ ಜಮೀನಿನ ಮೇಲೆ ದಾಳಿ ಮಾಡಿದ್ದ ಕಾಡಾನೆಗಳನ್ನು ಕಾಡಿಗೆ ಓಡಿಸುವ ವೇಳೆ ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಗುಂಡೇಟಿಗೆ ಬಲಿಯಾದ ಘಟನೆ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದ ಬಳಿ ನಡೆದಿದೆ.

ಶಿವನಂಜಯ್ಯ (30) ಗುಂಡೇಟಿಗೆ ಬಲಿಯಾದ ಗುತ್ತಿಗೆ ನೌಕರ. ಕೂನನಕೊಪ್ಪಲು ಗ್ರಾಮದ ಹೊರವಲಯದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಸಿಬ್ಬಂದಿಯತ್ತ ಧಾವಿಸಿದ ಆನೆಗಳನ್ನು ನಿಯಂತ್ರಿಸಲು ಅರಣ್ಯ ರಕ್ಷಕ ಪ್ರಕಾಶ್ ಗುಂಡು ಹಾರಿಸಿದ್ದಾರೆ. ಆ ಗುಂಡು ಶಿವನಂಜಯ್ಯ ಬೆನ್ನಿಗೆ ಹೊಕ್ಕಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.