ETV Bharat / state

ಗ್ರಾಮೀಣ ಭಾಗದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಿ: ಶಾಸಕ ಡಿ.ಸಿ.ತಮ್ಮಣ್ಣ - ಸಚಿವರಿಗೆ ಡಿ.ಸಿ ತಮ್ಮಣ್ಣ ಮನವಿ

ಮನೆಗಳಲ್ಲಿ ಐಸೋಲೇಟ್ ಆಗಿರುವ ಗ್ರಾಮೀಣ ಭಾಗದ ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗಳಿಗೆ ಶಿಫ್ಟ್ ಮಾಡುವಂತೆ ಶಾಸಕ ಡಿ.ಸಿ ತಮ್ಮಣ್ಣ ಸಲಹೆ ನೀಡಿದ್ದಾರೆ.

DC Thammanna urge to admit Rural Covid patients to CCC
ಶಾಸಕ ಡಿ.ಸಿ. ತಮ್ಮಣ್ಣ ಸಲಹೆ
author img

By

Published : May 19, 2021, 7:09 AM IST

ಮಂಡ್ಯ: ಯಾವುದೇ ರೋಗ ಲಕ್ಷಣಗಳಿಲ್ಲದ ಗ್ರಾಮೀಣ ಭಾಗದ ಸೋಂಕಿತರನ್ನು ಹೋಂ ಐಸೊಲೇಷನ್ ಮಾಡುವುದು ಸರಿಯಲ್ಲ. ಅವರನ್ನೂ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಿ ಚಿಕಿತ್ಸೆ ನೀಡುವುದು ಉತ್ತಮ ಎಂದು ಶಾಸಕ ಡಿ.ಸಿ. ತಮ್ಮಣ್ಣ ಸಲಹೆ ನೀಡಿದ್ದಾರೆ.

ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ರೋಗ ಲಕ್ಷಣಗಳಿಲ್ಲದವರನ್ನು ಹೋಂ ಐಸೊಲೇಷನ್‌ಗೆ ಒಳಪಡಿಸಿ ನಿಗಾ ಇರಿಸಲಾಗುತ್ತಿದೆ. ಆದರೆ, ಅವರೆಲ್ಲರೂ ಅಜಾಗರೂಕತೆ ತೋರುತ್ತಿದ್ದಾರೆ. ಸೋಂಕಿತರೇ ಮಾರುಕಟ್ಟೆಗೆ ಬಂದು ಸಾಮಗ್ರಿಗಳನ್ನು ಖರೀದಿಸುವುದು, ಹೊರಗಡೆ ಓಡಾಡುವುದು ಮಾಡುತ್ತಿದ್ದಾರೆ. ಇದರಿಂದ ಮತ್ತಷ್ಟು ಸೋಂಕು ಹೆಚ್ಚುವ ಸಾಧ್ಯತೆಯಿದೆ ಎಂದರು.

ಶಾಸಕ ಡಿ.ಸಿ ತಮ್ಮಣ್ಣ ಹೇಳಿಕೆ

ಇದನ್ನೂ ಓದಿ: ಮಂಡ್ಯದಲ್ಲಿ ಹೊಸ ಸೋಂಕಿತರಿಗಿಂತ ಚೇತರಿಕೆ ಪ್ರಮಾಣ ಹೆಚ್ಚು

ಗ್ರಾಮೀಣ ಭಾಗದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಲ್ಲಿಟ್ಟು ಚಿಕಿತ್ಸೆ ನೀಡುವಂತೆ ಟಾಸ್ಕ್ ಫೋರ್ಸ್‌ ಅಧ್ಯಕ್ಷರು ಮತ್ತು ಉನ್ನತ ಶಿಕ್ಷಣ ಸಚಿವರಾಗಿರುವ ಅಶ್ವತ್ಥ್ ನಾರಾಯಣ ಅವರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.