ಮಂಡ್ಯ: ಬಾಂಬೆ ಹಾಗೂ ಕೆಆರ್‌ಪೇಟೆ ಸ್ಲಂ ಅಂತೆ. ಮೊನ್ನೆಯಷ್ಟೇ ಕಾಮಾಟಿಪುರ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾಗಿದ್ದ ಮಾಜಿ ಸಚಿವ ಡಿ ಸಿ ತಮ್ಮಣ್ಣ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೇಳಿಕೆ ಬಗ್ಗೆ ವಿವರಣೆ ಕೊಡುವ ಸಂದರ್ಭದಲ್ಲಿ ಕೆಆರ್‌ಪೇಟೆಯನ್ನು ಬಾಂಬೆ ರೀತಿ ಸ್ಲಂ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಕೆಆರ್‌ಪೇಟೆಯಲ್ಲಿ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿದ ಡಿ ಸಿ ತಮ್ಮಣ್ಣ, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಒಂದೊಮ್ಮೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಬಾಂಬೆ ಕನ್ನಡಿಗರು ಆ ವ್ಯಾಪಾರದಲ್ಲಿ ಇದ್ದಾರೆ ಅಂತಾ ಹೇಳಿದ್ದೀನಾ.. ನನಗೆ ಕನ್ನಡಿಗರ ಬಗ್ಗೆ, ಕೆಆರ್‌ಪೇಟೆ ಜನರ ಬಗ್ಗೆ ಗೌರವ ಇದೆ. ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಹೋಗಿ ಹಾಗೇ ಹೇಳಿದೆ ಎಂದು ಸಮಜಾಯಿಷಿ ನೀಡಿದರು.
'ಮಾಜಿ ಸಚಿವ ಡಿ ಸಿ ತಮ್ಮಣ್ಣರಿಗೂ ಕಾಮಾಟಿಪುರಕ್ಕೂ ಸಂಬಂಧ..'
ಕೆಆರ್‌ಪೇಟೆ ಅಭಿವೃದ್ಧಿಯಾಗಿಲ್ಲ ಅನ್ನೋ ಅರ್ಥದಲ್ಲಿ ಹೇಳ್ದೆ.. ಅಕ್ಕ-ತಂಗಿಯರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ. ನಾನು ಬಾಂಬೆ ನೋಡಿರೋದೆ ನಾಲ್ಕು ಬಾರಿ. ಕಾಮಾಟಿಪುರ ಗೊತ್ತಿಲ್ಲ, ಕೇಳಿದ್ದೀವಿ ಅಷ್ಟೇ ಎಂದರು.
ಕೆಆರ್‌ಪೇಟೆಗೆ ₹120 ಕೋಟಿ ಅನುದಾನ ನೀಡಿದ್ದಾರೆ. ನಾನು ಪ್ರಭಾವಿ ಸಚಿವನಾಗಿದ್ರೂ ನನ್ನ ಕ್ಷೇತ್ರಕ್ಕೆ ₹75 ಕೋಟಿ ಕೊಟ್ಟಿದ್ರು. ಆ ಹಣದಲ್ಲೇ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಸಿಎಂ ಯಡಿಯೂರಪ್ಪ ಅವ್ರು ಹುಟ್ಟೂರು ಬೂಕನಕೆರೆಗೆ ಹೋಗುವ ರಸ್ತೆಯನ್ನೇ ಅಭಿವೃದ್ಧಿ ಮಾಡಿಲ್ಲ. ಹಾಗಾದರೆ 120 ಕೋಟಿ ತಂದು ಏನು ಮಾಡ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.