ಮಂಡ್ಯ: ಶಿಂಷಾ ನದಿಯಲ್ಲಿ ಒಂದೆ ಅಲ್ಲ ಇಡೀ ಜಿಲ್ಲೆಯಲ್ಲಿ ಅಕ್ರಮ ಮರಳು ಧಂದೆ ಹಾಗೂ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಸಾವಿರಾರು ಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಾಗಮಂಗಲದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಒಂದು ಇಲ್ಲ ಎರಡೂ ಬಿಟ್ಟರೇ ಬಹುತೇಕ ಎಲ್ಲ ಕಡೆ ಅಕ್ರಮ ಗಣಿಗಾರಿಕೆಗಳ ನಡೆಯುತ್ತಿದೆ. ಪ್ರಭಾವಿಗಳು ಗಣಿದಾರರು ಡಿಸಿ ಜೊತೆ ಅಡ್ಜಸ್ಟ್ ಆಗಿ ಧಂದೆ ನಡೆಸುತ್ತಿದ್ದಾರೆ. ಈಗಾಗಿ ನಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆ ಮಾಡಬೇಡಿ ಎಂದು ಹೇಳಿದ್ದೇನೆ ಎಂದರು.
ಈಗಾಗಲೇ ಅಕ್ರಮ ಮರಳುಗಾರಿಕೆ ದಂಧೆಯಲ್ಲಿ ಅಧಿಕಾರಿಗಳು ಶಾಮಿಲ್ ಆಗಿದ್ದಾರೆ. ಯಾರಾದರೂ ಹೇಳಿದರೆ ನಿಲ್ಲಿಸುತ್ತಾರೆ ಮತ್ತೆ ಶುರು ಮಾಡ್ಕೋಳ್ತಾರೆ. ಎತ್ತಿನ ಗಾಡಿಯಲ್ಲಿ ಮರಳು ತಂದು ಒಂದು ಕಡೆ ಸ್ಟಾಕ್ ಮಾಡಿ ಆಮೇಲೆ ದೊಡ್ಡಗಾಡಿಯಲಿ ಸಾಗಿಸುತ್ತಾರೆ. ಈ ಅಕ್ರಮ ಗಣಿಗಾರಿಕೆ ವಿರುದ್ದ ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಮಾಡಿದ್ರೆ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದರು.
ಜಿಲ್ಲಾಡಳಿತ ದೃಢ ನಿರ್ಧಾರ ಮಾಡುವುದಿಲ್ಲ. ಕಾರಣ, ಲಂಚ ತೆಗೆದುಕೊಳ್ಳಲು ಎಂದು ಆರೋಪಿಸಿದರು. ನಮ್ಮ ಸರ್ಕಾರವಿಲ್ಲ, ಅಧಿಕಾರಿ ತಪ್ಪು ಮಾಡಿದರೆ ಶಿಕ್ಷೆಕೊಡುವುದಕ್ಕೆ ಆಗಲ್ಲ. ನಾವು ವಿರೋಧ ಪಕ್ಷದವರು. ಆದರೆ ಇದರ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತ ವಿರುದ್ದ ಶಾಸಕ ಸುರೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.