ETV Bharat / state

ಮಂಡ್ಯದಲ್ಲಿ ಹೆಚ್ಚಾದ ಕೊರೊನಾ ಸಾವು ಪ್ರಕರಣಗಳು : ಕಳದ 16 ದಿನಗಳಲ್ಲಿ 94 ಮಂದಿ ಬಲಿ - ಮಂಡ್ಯ ಸೋಂಕಿತರ ಸಾವಿನ ಹೆಚ್ಚಳ

ಗುರುವಾರ ಒಂದೇ ದಿನ 1,191 ಮಂದಿ ಸೇರಿದಂತೆ ಇಲ್ಲಿಯವರೆಗೆ 29,479 ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 8,417 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 664, ಖಾಸಗಿ ಆಸ್ಪತ್ರೆಯಲ್ಲಿ 206, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,179, ಮನೆ ಆರೈಕೆಯಲ್ಲಿ 6,368 ಮಂದಿ ಚಿಕಿತ್ಸೆ ಪಡೆದಿದ್ದಾರೆ..

ಮಂಡ್ಯದಲ್ಲಿ ಹೆಚ್ಚಾದ ಕೊರೊನಾ ಸಾವು ಪ್ರಕರಣಗಳು: ಕಳದ 16 ದಿನಗಳಲ್ಲಿ 94 ಮಂದಿ ಬಲಿ

author img

By

Published : May 7, 2021, 6:13 PM IST

Updated : May 7, 2021, 7:40 PM IST

ಮಂಡ್ಯ : ಕೋವಿಡ್‌ ಎರಡನೇ ಅಲೆಯಲ್ಲಿ ದಿನದಿಂದ ದಿನಕ್ಕೆ ಸಾವಿನ ಪ್ರಕರಣ ಹೆಚ್ಚಾಗುತ್ತಿವೆ. ಕಳೆದ16 ದಿನಗಳಲ್ಲಿ 94 ಮಂದಿ ಕೊರೊನಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕೊರೊನಾ ಒಂದನೇ ಅಲೆಯಲ್ಲಿ ಇದ್ದ ಸಾವಿನ ಪ್ರಮಾಣಕ್ಕೂ ಎರಡನೇ ಅಲೆಯ ಸಾವಿನ ಪ್ರಮಾಣಕ್ಕೂ ವ್ಯತ್ಯಾಸವಿದೆ. ಕಡಿಮೆ ಅವಧಿಯಲ್ಲಿ ಅಧಿಕ ಸಾವಿನ ಪ್ರಕರಣ ದಾಖಲಾಗಿವೆ. ಬುಧವಾರ ಒಂದೇ ದಿನ ಜಿಲ್ಲೆಯಲ್ಲಿ 19 ಮಂದಿ ಮೃತಪಟ್ಟಿದ್ದು, ಇದು ಈವರೆಗಿನ ಗರಿಷ್ಠ ಸಾವಿನ ಪ್ರಕರಣಗಳಾಗಿವೆ.

ರೋಗ ಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯದೆ, ರೋಗ ಉಲ್ಬಣಿಸಿದಾಗ ಆಸ್ಪತ್ರೆಗೆ ಬರುತ್ತಿರುವುದೇ ಸಾವಿನ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣ ಎನ್ನುತ್ತಾರೆ ಸಚಿವ ನಾರಾಯಣಗೌಡ.

ನಿತ್ಯವೂ ಒಂದಂಕಿಯಲ್ಲಿದ್ದ ಸಾವಿನ ಪ್ರಮಾಣ, ಮೇ 5ರಂದು ದಿಢೀರನೇ 19ಕ್ಕೆ ಏರಿಕೆಯಾಗಿದೆ. ಎರಡನೇ ಅಲೆ ಪ್ರಾರಂಭಕ್ಕೂ ಮುನ್ನ ಜಿಲ್ಲೆಯಲ್ಲಿ 154 ಮಂದಿ ಮೃತಪಟ್ಟಿದ್ದರು. ಆದರೆ, ಎರಡೇ ತಿಂಗಳ ಅವಧಿಯಲ್ಲಿ ಸುಮಾರು 94 ಮಂದಿ ಜೀವ ಕಳೆದುಕೊಂಡಿದ್ದಾರೆ.

ಮಂಡ್ಯದಲ್ಲಿ ಹೆಚ್ಚಾದ ಕೊರೊನಾ ಸಾವು ಪ್ರಕರಣಗಳು : ಕಳದ 16 ದಿನಗಳಲ್ಲಿ 94 ಮಂದಿ ಬಲಿ

ಈಗಾಗಲೇ ಜಿಲ್ಲೆಯಾದ್ಯಂತ ಕರ್ಫ್ಯೂ ವಿಧಿಸಿದ್ದರೂ ಸೋಂಕಿನ ಪ್ರಮಾಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಮೊದಲಿಗಿಂತಲೂ ಅಧಿಕ ಪ್ರಮಾಣದ ಪ್ರಕರಣ ನಿತ್ಯವೂ ವರದಿಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಸುಮಾರು 1,500ಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಮೃತಪಟ್ಟವರಲ್ಲಿ ಬೆರಳೆಣಿಕೆ ಮಂದಿ 19 ರಿಂದ 27 ವರ್ಷದವರಾಗಿದ್ದಾರೆ.ಸಾವಿನ ಪ್ರಕರಣಗಳು ಆಗಾಗ ವರದಿಯಾದರೂ ಜಿಲ್ಲೆಯ ಸಾವಿನ ಪ್ರಮಾಣ ಶೇ.0.07 ಆಗಿದೆ. ಈಗಾಗಲೇ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಸಾರ್ವಜನಿಕರು ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು ಎಂದು ಡಿಹೆಚ್‌ಒ ಡಾ.ಹೆಚ್‌.ಪಿ.ಮಂಚೇಗೌಡ ಮನವಿ ಮಾಡಿದ್ದಾರೆ. ಗುರುವಾರ ಒಂದೇ ದಿನ 1,301 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 38,145ಕ್ಕೆ ಏರಿಕೆಯಾಗಿದೆ.

ಪಾಸಿಟಿವಿಟಿ ಶೇ.30ಕ್ಕೆ ಏರಿಕೆಯಾಗಿದೆ. ಮಂಡ್ಯ ತಾಲೂಕು 479, ಮದ್ದೂರು 189, ಮಳವಳ್ಳಿ 195, ಪಾಂಡವಪುರ 127, ಶ್ರೀರಂಗಪಟ್ಟಣ 194, ಕೆ.ಆರ್‌.ಪೇಟೆ 14, ನಾಗಮಂಗಲ 78, ಹೊರಜಿಲ್ಲೆಯ 25 ಮಂದಿಗೆ ಸೇರಿದಂತೆ 1,301 ಮಂದಿಗೆ ಸೋಂಕು ದೃಢಪಟ್ಟಿದೆ.

ಗುರುವಾರ ಒಂದೇ ದಿನ 1,191 ಮಂದಿ ಸೇರಿದಂತೆ ಇಲ್ಲಿಯವರೆಗೆ 29,479 ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 8,417 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 664, ಖಾಸಗಿ ಆಸ್ಪತ್ರೆಯಲ್ಲಿ 206, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,179, ಮನೆ ಆರೈಕೆಯಲ್ಲಿ 6,368 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಗುರುವಾರ 267 ರ‍್ಯಾಪಿಡ್‌, 4,456 ಆರ್‌ಟಿಪಿಸಿಆರ್‌ ಸೇರಿದಂತೆ 4,723 ಪರೀಕ್ಷೆಗಳನ್ನು ಮಾಡಲಾಗಿದೆ. 1,55,611 ರ‍್ಯಾಪಿಡ್‌, 52,6,212 ಆರ್‌ಟಿಪಿಸಿಆರ್‌ ಸೇರಿದಂತೆ ಇಲ್ಲಿಯವರೆಗೆ 68,1,823 ಪರೀಕ್ಷೆ ಮಾಡಲಾಗಿದೆ.

ಗುರುವಾರ ಕೊರೊನಾ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಮೃತಪಟ್ಟಿದ್ದು, ಇಲ್ಲಿಯವರೆಗೆ 247 ಮಂದಿ ಮೃತಪಟ್ಟಿದ್ದಾರೆ. ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಈಗಲಾದರೂ ಜನರು ಎಚ್ಚೆತ್ತು ಕೋಳ್ಳುತ್ತಾರಾ ಕಾದು ನೋಡಬೇಕಿದೆ.

Last Updated : May 7, 2021, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.