ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ದಿನೇ ದಿನೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, 1235 ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ಹಿನ್ನೆಲೆ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 31 697 ಕ್ಕೆ ಏರಿಕೆಯಾಗಿದೆ. ನಿನ್ನೆ 829 ಮಂದಿ ಗುಣಮುಖಗೊಂಡು ಬಿಡುಗಡೆಯಾಗಿದ್ದಾರೆ. ಈವರೆಗೆ 25354 ಜನರು ಗುಣಮುಖವಾಗಿದ್ದಾರೆ.
ಇಲ್ಲಿವರಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 6126 ಏರಿಕೆಯಾಗಿದ್ದು, ಜಿಲ್ಲೆಯಲ್ಲಿಂದು ಕೋವಿಡ್ ಅಲ್ಲದ ಅನ್ಯಕಾರಣದ ಇಬ್ಬರು ಮರಣ ಹೊಂದಿದ್ದಾರೆ. ಈವರೆಗೆ 215 ಮಂದಿ ಕೊರೊನಾಗೆ ಬಲಿ ಯಾಗಿದ್ದಾರೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿದೆ.
ತಾಲೂಕುವಾರು ಕೋವಿಡ್ ಸೋಂಕಿತರ ವಿವರ:
ಮಂಡ್ಯ 218, ಮದ್ದೂರು 142, ಮಳವಳ್ಳಿ 281, ಪಾಂಡವಪುರ 144, ಶ್ರೀರಂಗಪಟ್ಟಣ 125, ಕೆ.ಆರ್.ಪೇಟೆ 111, ನಾಗಮಂಗಲ 188, ಹೊರ ಜಿಲ್ಲೆಯ 26 ಪ್ರಕರಣ ದಾಖಲಾಗಿವೆ.