ಬೀದರ್/ಕೋಲಾರ/ ಮಂಡ್ಯ: ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಾಲನೆ ನೀಡಲಾಗಿದ್ದು, ಬೀದರ್, ಕೋಲಾರ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಲಸಿಕೆ ಪಡೆದುಕೊಂಡಿದ್ದಾರೆ.
ಬೀದರ್ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ಅವರು ಕೋವಿಶಿಲ್ಡ್ ಲಸಿಕೆ ಪಡೆದುಕೊಂಡರು. ಮಂಗಲಪೇಟದಲ್ಲಿ ಇರುವ ಪೊಲೀಸ್ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿ.ಜಿ ರೆಡ್ಡಿ ಲಸಿಕೆ ಹಾಕಿಸಿಕೊಂಡರು.
ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ಅವರು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡು ಬಳಿಕ ಮಾತನಾಡಿದ ಅವರು, ಮೊದಲಿಗೆ ಲಸಿಕೆ ಕುರಿತು ಆತಂಕ, ಭಯ ಇತ್ತು. ಆದರೆ, ಈಗ ಅಂತಹ ಯಾವುದೇ ವಾತಾವರಣ ಇಲ್ಲ. ಜಿಲ್ಲೆಯಲ್ಲಿ ಯಶಸ್ವಿಯಾಗಿ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ ಎಂದರು.
ಎರಡನೇ ಹಂತದ ಲಸಿಕೆ ವಿತರಣೆ ವೇಳೆ ಮಂಡ್ಯದ ಮಿಮ್ಸ್ ಕಾಲೇಜಿನಲ್ಲಿ ಡಿಸಿ ವೆಂಕಟೇಶ್, ಎಸ್ಪಿ ಪರಶುರಾಮ್, ತಹಶಿಲ್ದಾರ್ ಚಂದ್ರಶೇಖರ್ ಸಂಗಾಳಿ, ಜಿ.ಪಂ. ಸಿಇಒ ಜುಲ್ಫಿಕರ್ ಉಲ್ಲಾ ಅವರು ಸಹ ಲಸಿಕೆ ಪಡೆದುಕೊಂಡರು.