ETV Bharat / state

ಮಂಡ್ಯದಲ್ಲಿ 297 ಮಂದಿಗೆ ಕೋವಿಡ್​ ದೃಢ: 9 ಜನರು ಬಲಿ - Corona 2nd wave

ಮಂಡ್ಯದಲ್ಲಿ ಶುಕ್ರವಾರ ಮಹಾಮಾರಿ ಕೊರೊನಾಗೆ 9 ಮಂದಿ ಸೋಂಕಿತರು ಬಲಿಯಾಗಿದ್ದು, ಮೃತರ ಸಂಖ್ಯೆ 391ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,281ಕ್ಕೆ ಏರಿದೆ.

Mandya
ಮಂಡ್ಯದಲ್ಲಿ 297 ಮಂದಿಗೆ ಕೊರೊನಾ ಪಾಸಿಟಿವ್
author img

By

Published : May 22, 2021, 6:37 AM IST

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಶುಕ್ರವಾರ 297 ಮಂದಿಗೆ ಸೋಂಕು ದೃಢಪಟ್ಟಿದ್ದರೆ, 9 ಜನರು ಸಾವನ್ನಪ್ಪಿದ್ದಾರೆ.

ಈ ಮೂಲಕ ಸೋಂಕಿತರ ಸಂಖ್ಯೆ 54,046ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 391ಕ್ಕೇರಿದೆ. 965 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 47,372 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 6,281 ಸಕ್ರಿಯ ಪ್ರಕರಣಗಳಿವೆ.

ತಾಲೂಕುವಾರು ವಿವರ:
ಮಂಡ್ಯ 79, ಮದ್ದೂರು 31, ಮಳವಳ್ಳಿ 14, ಪಾಂಡವಪುರ 15, ಶ್ರೀರಂಗಪಟ್ಟಣ 14, ಕೆ.ಆರ್.ಪೇಟೆ 73, ನಾಗಮಂಗಲ 63 ಹಾಗೂ ಹೊರ ಜಿಲ್ಲೆಯಿಂದ ಬಂದ 8 ಜನರಿಗೆ ಸೋಂಕು ವಕ್ಕರಿಸಿದೆ.

ನಾಗಮಂಗಲ ಸಂಪೂರ್ಣ ಲಾಕ್​ಡೌನ್​

ನಾಗಮಂಗಲ ತಾಲೂಕಿನಲ್ಲಿ 5 ದಿನ ಸಂಪೂರ್ಣ ಲಾಕ್​ಡೌನ್​ ಮಾಡಿ ತಹಶೀಲ್ದಾರ್ ಮಹಮದ್ ಆದೇಶ ಹೊರಡಿಸಿದ್ದಾರೆ. ಸೋಮವಾರ, ಗುರುವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದ ದಿನಗಳಲ್ಲಿ ಮೆಡಿಕಲ್, ಆಸ್ಪತ್ರೆ, ಹಾಲು ಮಾರಾಟಕ್ಕೆ ಮಾತ್ರ ಅವಕಾಶವಿರುತ್ತದೆ.

ಓದಿ: ಸೋಂಕಿತನಿಂದ ಕೋವಿಡ್ ನಿಯಮ ಉಲ್ಲಂಘನೆ: ಪ್ರಕರಣ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.