ಮಂಡ್ಯ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಮೂವರು ಮಕ್ಕಳು ಸೇರಿದಂತೆ 13 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರೆಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ.
ಸಂಜೆ ಬಂದ ವರದಿಯಿಂದ ಕೆ.ಆರ್. ಪೇಟೆ ಹಾಗೂ ನಾಗಮಂಗಲ ತಾಲೂಕಿನ ಜನರಲ್ಲಿ ಆತಂಕ ಉಂಟಾಗಿದೆ. ಪಿ-1044 ರಿಂದ ಪಿ- 1056ರವರೆಗೂ ಜಿಲ್ಲೆಯ ರೋಗಿಗಳಿ ಆಗಿದ್ದು, ಇವರೆಲ್ಲಾ ಮುಂಬೈನಿಂದ ಬಂದು ನೇರವಾಗಿ ಕ್ವಾರಂಟೈನ್ ಆಗಿದ್ದರು. ಇವರಲ್ಲಿ 6 ವರ್ಷ, 9 ವರ್ಷ ಹಾಗೂ 15 ವರ್ಷದ ಮಕ್ಕಳಿದ್ದು, ಎಲ್ಲರಿಗೂ ಮಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 49 ಪ್ರಕರಣ ಪತ್ತೆಯಾಗಿದ್ದು, ಇವರಲ್ಲಿ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಪ್ರಸ್ತುತ, 30 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.