ಮಂಡ್ಯ: ಕೊರೊನಾ ಎರಡನೇ ಹಂತದ ಲಾಕ್ಡೌನ್ಅನ್ನು ಪೊಲೀಸರು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಕೊರೊನಾ ಪೀಡಿತ ಪ್ರದೇಶದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಪ್ರತಿನಿತ್ಯ ಪಥಸಂಚಲನದ ಮೂಲಕ ಜಾಗೃತಿ ಮಾಡಿಸುತ್ತಿದ್ದಾರೆ.
ನಗರದ ಸ್ವರ್ಣಸಂದ್ರ ಸೇರಿದಂತೆ ಮಳವಳ್ಳಿಯಲ್ಲಿ ಪೊಲೀಸ್ ಪಥಸಂಚಲನ ನಡೆಯುತ್ತಿದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಜೊತೆಗೆ ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದ್ದಾರೆ. ಅನವಶ್ಯಕವಾಗಿ ಓಡಾಡುತ್ತಿರುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿ, ಬೈಕ್ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.
ಈಗಾಗಲೇ ಡ್ರೋನ್ ಕ್ಯಾಮರಾ ಹಾಕಿದ್ದರೂ ಕೂಡ ಅಲ್ಲಲ್ಲಿ ಜನರು ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಕೆ.ಎಸ್.ಆರ್.ಪಿ ತುಕಡಿಯನ್ನು ಜಿಲ್ಲೆಗೆ ಕರೆಸಿಕೊಂಡಿದ್ದು, ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ.