ETV Bharat / state

ಆತ್ಮ ನಿರ್ಭರ ನನ್ನ ಯೋಜನೆಯ ಕಾಪಿ: ಕುಮಾರಸ್ವಾಮಿ

ಸ್ವತಂತ್ರವಾಗಿ 5 ವರ್ಷ ಅಧಿಕಾರ ಕೊಟ್ಟರೆ "ಪಂಚರತ್ನ" ಕಾರ್ಯಕ್ರಮ ಎಂದು ಹೆಸರಿಟ್ಟು ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

dsd
ಆತ್ಮ ನಿರ್ಭರ್ ನನ್ನ ಯೋಜನೆಯ ಕಾಪಿ ಎಂದ ಎಚ್.ಡಿ.ಕುಮಾರಸ್ವಾಮಿ
author img

By

Published : Jan 10, 2021, 8:54 PM IST

Updated : Jan 10, 2021, 9:14 PM IST

ಮಂಡ್ಯ: ಪ್ರಧಾನಿ ಮೋದಿ, ಬಿಜೆಪಿ ನನ್ನ ಯೋಜನೆ ಕಾಪಿ ಮಾಡಿದ್ದಾರೆ. ಆತ್ಮ ನಿರ್ಭರ ಕಾರ್ಯಕ್ರಮ ಅಂದಿನ ನನ್ನ ಕಾಂಪಿಟ್ ವಿತ್ ಚೀನಾದ್ದು. ಕೇಂದ್ರ ಸರ್ಕಾರ ಅದನ್ನು ಹೆಸರು ಬದಲಿಸಿಕೊಂಡಿದೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಆತ್ಮ ನಿರ್ಭರ ನನ್ನ ಬ್ರೈನ್ ಚೈಲ್ಡ್, ನಾನು ಕೊಟ್ಟಂತಹ ಕಾರ್ಯಕ್ರಮಗಳು. ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಟಾಯ್ಸ್ ಇಂಡಸ್ಟ್ರಿ ಎಂಒಗೆ ಸಹಿ ಹಾಕಿದವರು ಯಾರು? ಕಾಂಪಿಟ್ ವಿತ್ ಚೀನಾ ಅಂತಾ ಘೋಷಣೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಬೈ ಎಲೆಕ್ಷನ್ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. 2023 ಕರ್ನಾಟಕ ರಾಜ್ಯ, ಜನತಾದಳದ ರಾಜ್ಯ, ಜನತಾ ರಾಜ್ಯ. ಅದನ್ನು ತರಲಿಕ್ಕೆ ಏನು ಬೇಕು, ನನ್ನ ಕಾರ್ಯಕ್ರಮವೇ ಬೇರೆ ಇದೆ. ಸಾಲ ಮನ್ನಾ ಘೋಷಣೆ ಮಾಡಿದ್ದೆ. ಆದರೆ ಸಾಲ ಮನ್ನಾ ಮಾಡೋಕೆ ಆಗಲ್ಲ ಅಂದ್ರು. ಮಾಡಿ ತೋರಿಸಿದೆ. ಮುಂದೆಯೂ ಅಷ್ಟೇ, ರಾಜ್ಯದ ಪ್ರಗತಿಗೆ ಜೆಡಿಎಸ್ ಬೆಂಬಲಿಸಿ ಜಾತಿ, ಹಣದ ವ್ಯಾಮೋಹ ಬಿಟ್ಟು ಒಂದು ಬಾರಿ ಜೆಡಿಎಸ್ ಗೆಲ್ಲಿಸಿ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಕೊಡದಿದ್ದರೆ ನಮ್ಮ ಪಕ್ಷ ಮುಂದೆಂದೂ ಜನರ ಮತ ಕೇಳಲ್ಲ. ಅಂದೇ ಪಕ್ಷ ವಿಸರ್ಜನೆ ಮಾಡಿಬಿಡುತ್ತೇನೆ ಎಂದರು.

Last Updated : Jan 10, 2021, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.