ETV Bharat / state

ಶ್ರೀರಂಗಪಟ್ಟಣದಲ್ಲಿ ವಿವಾದಿತ ಹೇಳಿಕೆ : ಕಾಳಿಮಠದ ಋಷಿಕುಮಾರ್ ಸ್ವಾಮೀಜಿ ಬಂಧನ - ಶ್ರೀರಂಗಪಟ್ಟಣದಲ್ಲಿ ಕಾಳಿಮಠದ ಋಷಿಕುಮಾರ್ ಸ್ವಾಮೀಜಿ ವಿವಾದಿತ ಹೇಳಿಕೆ

ವಿವಾದಿತ ಹೇಳಿಕೆ ಸಂಬಂಧ ಕಾಳಿಮಠದ ಋಷಿಕುಮಾರ್ ಸ್ವಾಮೀಜಿಯನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ..

ಕಾಳಿಮಠದ ಋಷಿಕುಮಾರ್ ಸ್ವಾಮೀಜಿ ಬಂಧನ
ಕಾಳಿಮಠದ ಋಷಿಕುಮಾರ್ ಸ್ವಾಮೀಜಿ ಬಂಧನ
author img

By

Published : Jan 18, 2022, 1:55 PM IST

Updated : Jan 18, 2022, 3:06 PM IST

ಮಂಡ್ಯ : ಇತ್ತೀಚಿಗೆ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಕಾಳಿಮಠದ ಋಷಿಕುಮಾರ್ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂದೆ ನಿಂತು ಇವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾಳಿಮಠದ ಋಷಿಕುಮಾರ್ ಸ್ವಾಮೀಜಿ ಬಂಧನ

ಈ ಹಿನ್ನೆಲೆ ಇಂದು ಅವರನ್ನು ಚಿಕ್ಕಮಗಳೂರಿನ ಮಠದಿಂದ ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ. ಸ್ವಾಮೀಜಿಗೆ ಜ್ವರ ಇರುವ ಹಿನ್ನೆಲೆಯಲ್ಲಿ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು.

ಈ ಬಗ್ಗೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿ, ಬೆಳಗ್ಗೆ 5 ಗಂಟೆಗೆ ನನ್ನನ್ನು ಬಂಧಿಸಿದ್ದಾರೆ. ಆದ್ರೆ, ನಾನು ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ನಾನು ಇರುವವರೆಗೂ ನನ್ನ ಹೋರಾಟ ಇರುತ್ತೆ ಎಂದು ತಿಳಿಸಿದ್ದಾರೆ.

(ಇದನ್ನೂ ಓದಿ: ವಾರ್ಡರ್‌ಗೆ ಹೆದರಿ ಮೊಬೈಲ್‌ ನುಂಗಿದ ಕೈದಿ ; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ತೆಗೆದ ವೈದ್ಯರು)

Last Updated : Jan 18, 2022, 3:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.