ಮಂಡ್ಯ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕಿನ 16 ಗ್ರಾಮಗಳನ್ನ ಕಂಟೈನ್ಮೆಂಟ್ ಝೋನ್ಗಳಾಗಿ ಘೋಷಿಸಿ ತಹಶೀಲ್ದಾರ್ ವಿಜಯಣ್ಣ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಕೋರೇಗಾಲ, ಕಿರಗಾವಲು, ಹಲಗೂರು, ಹುಸ್ಕೂರು, ಚೊಟ್ಟನಹಳ್ಳಿ, ಬಿ.ಜಿ.ಪುರ, ಹಿಟ್ಟಿನಹಳ್ಳಿ, ಹುಲ್ಲೇಗಾಲ, ಲಿಂಗಪಟ್ಟಣ್ಣ, ರಾಗಿಬೊಮ್ಮನಹಳ್ಳಿ, ಪುರಿಗಾಲಿ, ತಳಗವಾದಿ, ಅಗಸನಪುರ, ಮಳವಳ್ಳಿ ಪಟ್ಟಣದ ಎನ್ಇಎಸ್ ಬಡಾವಣೆ ಸೇರಿದಂತೆ 16 ಗ್ರಾಮಗಳನ್ನ ಸೀಲ್‌ಡೌನ್ ಮಾಡಲಾಗಿದೆ.
ಈ ಗ್ರಾಮಗಳಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆ ನಡೆಸಬೇಕು. ಸೋಂಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರು ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ.
ಈಗಾಗಲೇ ಹಳ್ಳಿಗಳಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿದ್ದು, ಹಳ್ಳಿ ಜನರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ, ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಸಹೋದರಿಯೂ ಕೊರೊನಾ ಸೋಂಕಿಗೆ ಬಲಿ