ಮಂಡ್ಯ: ರಾಜ್ಯದಲ್ಲಿ 'ಮಿನಿ ಸಮರ'ದ ಕಣ ರಂಗೇರುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರಲ್ಲಿ ಒಮ್ಮತ ಮೂಡಿಸಲು ಕೆಳ ಮಟ್ಟದಲ್ಲೇ ಕಸರತ್ತು ಆರಂಭವಾಗಿದೆ. ಕೆ.ಆರ್ ಪೇಟೆಯಲ್ಲಿ ಮುಖಂಡರ ಸಭೆ ನಡೆಸಿ ನಾಯಕರೆಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಚಟುವಟಿಕೆ ಗರಿಗೆದರಿದೆ. ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ಒಮ್ಮತ ಮೂಡಿಸಲು ಕಾಂಗ್ರೆಸ್ ಕಾರ್ಯಾಚರಣೆ ನಡೆಸಿದೆ. ಖಾಸಗಿ ಸಮುದಾಯ ಭವನದಲ್ಲಿ ಮುಖಂಡರ ಹಾಗೂ ಕಾರ್ಯಕರ್ತ ಸಭೆ ಮಾಡಿ, ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಒಗ್ಗೂಡಿ ಕೆಲಸ ಮಾಡಲು ನಿರ್ಧರಿಸಲಾಗಿದೆ.
ಕೈ ಪಕ್ಷದಲ್ಲಿ ಹೆಚ್ಚಿದ ಹುರಿಯಾಳುಗಳ ಸಂಖ್ಯೆ:
ಕಾಂಗ್ರೆಸ್‌ನಲ್ಲಿ 8 ಕ್ಕೂ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಕಿಕ್ಕೇರಿ ಸುರೇಶ್, ಪ್ರಕಾಶ್, ನಾಗೇಶ್ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಪಕ್ಷಕ್ಕೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗೋ ಸಾಧ್ಯತೆ ಕಂಡು ಬಂದಿದೆ.