ETV Bharat / state

ಮೈದುಂಬಿದ ಕಾವೇರಿ: ಕೆಆರ್​ಎಸ್​ನಲ್ಲಿ ಬಾಗಿನ ಅರ್ಪಿಸಲಿರುವ ಸಿಎಂ

author img

By

Published : Aug 17, 2019, 12:41 PM IST

ಮಳೆಯಿಂದಾಗಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಇದರಿಂದ ಕೆಆರ್​ಎಸ್ ಗರಿಷ್ಠ ಮಟ್ಟ ತಲುಪಿದೆ. ಅಂತೆಯೇ ಬಾಗಿನ ಅರ್ಪಿಸಲು ಸಿಎಂ ಆಗಮಿಸುವ ಸಾಧ್ಯತೆ ಇದೆ.

ಭದ್ರತಾ ಪರಿಶೀಲನೆ

ಮಂಡ್ಯ: ಮಡಿಕೇರಿಯಲ್ಲಿ ಮಳೆ ಹಿನ್ನೆಲೆ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಇದರಿಂದ ಕೆಆರ್​ಎಸ್ ಗರಿಷ್ಠ ಮಟ್ಟ ತಲುಪಿದ್ದು, ತಮಿಳುನಾಡಿಗೂ ವಾಡಿಕೆಗಿಂತ ಹೆಚ್ಚಿನ ನೀರನ್ನು ಬಿಡಲಾಗಿದೆ.

ತುಂಬಿರುವ ಕೆಆರ್​ಎಸ್ ಅಣೆಕಟ್ಟೆಗೆ ಸೋಮವಾರವೇ ಸಿಎಂ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಣೆಕಟ್ಟೆಗೆ ಮಂಡ್ಯ ಎಸ್ಪಿ ಪರಶುರಾಮ್, ಸ್ಥಳೀಯ ನೀರಾವರಿ ಇಲಾಖೆ ಅಧಿಕಾರಿಗಳು, ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಭದ್ರತಾ ಪರಿಶೀಲನೆ

ಸಿಎಂ ಭೇಟಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಸೋಮವಾರ ಬರದೇ ಇದ್ದರೆ, ಸಂಪುಟ ವಿಸ್ತರಣೆ ನಂತರ ಅಣೆಕಟ್ಟೆಗೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ.

Intro:
ಮಂಡ್ಯ: ಮಡಿಕೇರಿಯಲ್ಲಿಯಲ್ಲಿ ಮಳೆಯ ಹಿನ್ನೆಲೆಯಲ್ಲಿ ಕಾವೇರಿ ಮಾತೆ ಮೈದುಂಬಿ ಹರಿದಳು. ಇದರಿಂದ ಕೆ.ಆರ್.ಎಸ್ ಗರಿಷ್ಟ ಮಟ್ಟ ತಲುಪಿದ್ದು, ತಮಿಳುನಾಡಿಗೂ ವಾಡಿಕೆಗಿಂತ ಹೆಚ್ಚಿನ ನೀರನ್ನು ಬಿಡಲಾಗಿದೆ.

ತುಂಬಿರುವ ಕೆ.ಆರ್.ಎಸ್ ಅಣೆಕಟ್ಟೆಗೆ ಸೋಮವಾರವೇ ಸಿಎಂ ಬಿ.ಎಸ್. ಯಡಿಯೂರಪ್ಪ ಬಾಗೀನ ಅರ್ಪಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಮಂಡ್ಯ ಎಸ್ ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸ್ಥಳೀಯ ನೀರಾವರಿ ಇಲಾಖೆ ಅಧಿಕಾರಿಗಳು, ರಾಜ್ಯ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳ ಜೊತೆ ಅಣೆಕಟ್ಟೆಗೆ ಭೇಟಿ ನೀಡಿದ ಪರಶುರಾಮ್, ಈ ಹಿಂದೆ ಬಾಗೀನ ಅರ್ಪಿಸುತ್ತಿದ್ದ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಬಿಜೆಪಿ ವಲಯದಲ್ಲೂ ಸಿಎಂ ಯಡಿಯೂರಪ್ಪ ಕೆ.ಆರ್.ಎಸ್ ಗೆ ಭೇಟಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಸೋಮವಾರ ಬರದೇ ಇದ್ದರೆ, ಸಂಪುಟ ವಿಸ್ತರಣೆ ನಂತರ ಅಣೆಕಟ್ಟೆಗೆ ಆಗಮಿಸಿ ಬಾಗೀನ ಅರ್ಪಣೆ ಮಾಡಲಿದ್ದಾರೆ.

Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.