ಮಂಡ್ಯ: ಕೊನೆಗೂ ಮುಖ್ಯಮಂತ್ರಿ ಕಪ್ಗೆ ಕಾಲ ಕೂಡಿ ಬಂದಿದೆ. ಗ್ರಹಣ ಮುಗಿದ ನಂತರ ಟೂರ್ನಿಗೆ ಹಸಿರು ನಿಶಾನೆ ಸಿಕ್ಕಿದೆ. ಮಂಡ್ಯ ಜಿಲ್ಲಾ ಫುಟ್ಬಾಲ್ ಸಂಸ್ಥೆ 2020ರ ಜನವರಿ 3ರಿಂದ 12ರ ವರೆಗೆ ಸಿಎಂ ಕಪ್ ಫುಟ್ಬಾಲ್ ಕಪ್ ಆಯೋಜನೆ ಮಾಡಲಾಗಿದೆ.
ಮಂಡ್ಯದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ ಸಿಗಲಿದೆ. 2020ರ ಜನವರಿ 03ರಿಂದ 12ರ ವರೆಗೆ ಸಿಎಂ ಕಪ್ ಟೂರ್ನಿ ನಡೆಯುತ್ತಿದ್ದು, ತೆಲಗಾಂಣ, ಕೇರಳ, ಆಂಧ್ರಪ್ರದೇಶ ತಂಡಗಳು ಪಾಲ್ಗೊಳ್ಳುತ್ತಿವೆ. ಒಟ್ಟು 15 ಪಂದ್ಯಗಳನ್ನು ಸ್ಟೇಡಿಯಂನಲ್ಲಿ ಆಯೋಜನೆ ಮಾಡಲಾಗಿದ್ದು, ಪಂದ್ಯಾವಳಿಗಾಗಿ ಎಲ್ಲ ರೀತಿಯನ ಸಿದ್ಧತೆಯನ್ನು ಜಿಲ್ಲಾ ಫುಟ್ಬಾಲ್ ಸಂಸ್ಥೆ ನಿರ್ವಹಿಸುತ್ತಿದೆ ಎಂದು ಸಮಿತಿ ಅಧ್ಯಕ್ಷರಾದ ಸಿ.ಎಸ್. ಪುಟ್ಟರಾಜು ತಿಳಿಸಿದರು.
ಟೂರ್ನಿಯಲ್ಲಿ ತೆಲಗಾಂಣದ ಡೆಕ್ಕನ್ ಡೈನಮೋಸ್, ಮಂಗಳೂರು ಫುಟ್ಬಾಲ್ ಕ್ಲಬ್, ಬೆಂಗಳೂರು ಇಂಡಿಪೆಂಡೆಂಟ್ ಫುಟ್ಬಾಲ್ ಕ್ಲಬ್, ಎಚ್.ಎ.ಎಲ್ ಸ್ಪೋರ್ಟ್ಸ್ ಕ್ಲಬ್ ತಂಡಗಳು ಎ ಗುಂಪಿನಲ್ಲಿವೆ. ಇನ್ನು ಬಿ ಗುಂಪಿನಲ್ಲಿ ಕೇರಳದ ಕೆಎಸ್ಇಬಿ, ಆಂಧ್ರ ಪ್ರದೇಶದ ಎಎಎ ತಂಡ, ಕರ್ನಾಟಕದ ಕಿಕ್ ಸ್ಟಾರ್ ಕ್ಲಬ್, ಬೆಂಗಳೂರು ಡ್ರೀಮ್ ಯುನೈಟೆಡ್ ಕ್ಲಬ್ ತಂಡಗಳು ಭಾಗವಹಿಸಲಿವೆ.
ಟೂರ್ನಿ ನಡೆಯುತ್ತೋ ಇಲ್ಲವೋ ಎಂಬ ಅನುಮಾನ ಹೊಂದಿದ್ದ ಫುಟ್ಬಾಲ್ ಪ್ರೇಮಿಗಳಿಗೆ ಕೊನೆಗೂ ಹೊಸ ವರ್ಷದ ಗಿಫ್ಟ್ ಸಿಕ್ಕಿದೆ. 2020ರ ಜನವರಿ 12ರಂದು ಅಂತಿಮ ಪಂದ್ಯ ನಡೆಯಲಿದ್ದು, ಸಿಎಂ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ವಿತರಣೆ ಮಾಡಲಿದ್ದಾರೆ.