ಮಂಡ್ಯ: ಕುಮಾರಸ್ವಾಮಿ ನಾಲಿಗೆಗೆ ಹಿಡಿತ ಇಲ್ಲ, ಅವರಿಗೆ ಬಾಯಿ ಚಪಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ಮಾಜಿ ಸಿ ಎಂ ಹೆಚ್.ಡಿ.ಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ವಿಚಾರ, ರಾಜ್ಯ-ರಾಷ್ಟ್ರದ ವಿಚಾರ ಮಾತನಾಡಲ್ಲ. ಪೆಟ್ರೋಲ್-ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಗಿದೆ. ಅದರ ಬಗ್ಗೆ ಮಾತನಾಡಲ್ಲ. ಆದ್ರೆ, ಆರ್ಎಸ್ಎಸ್ ಸಿದ್ದಾಂತ, ಸಿದ್ದರಾಮಯ್ಯ-ಡಿಕೆ ಬಗ್ಗೆ ಮಾತ್ರ ಮಾತನಾಡ್ತಾರೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಕೆಲಸ ಮಾಡಿಲ್ಲ
ನಾನು ಬೈಯ್ಯಬೇಕು. ಅವರು ನನಗೆ ಬೈಯ್ಯಬೇಕು. ನಮ್ಮ ಸಮಾಜ ಪ್ರೀತಿಸಬೇಕು. ಅಷ್ಟೇ ಅವರಿಗೆ ಬೇಕಾಗಿರೋದು. ಅವರು ಮುಖ್ಯಮಂತ್ರಿ ಇದ್ದಾಗ ಕೆಲಸ ಮಾಡಿಲ್ಲ. ವೆಸ್ಟ್ಎಂಡ್ನಲ್ಲಿ ಮಲಗಿದ್ರು. ಬೀದರ್ನಲ್ಲಿ ಜನರನ್ನ ಬೈದರು. ಇನ್ನೊಲ್ಲೋ ಹೋಗಿ ಏನೋ ಅಂದ್ರು ಎಂದು ಹೆಚ್.ಡಿ.ಕೆ ಬಗ್ಗೆ ವ್ಯಂಗ್ಯವಾಡಿದರು.
ಹೆಚ್‌ಡಿಕೆ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ
ಸಿದ್ದರಾಮಯ್ಯ ಎಷ್ಟೋ ಬಾರಿ ಹೇಳಿದ್ದಾರೆ. ಅವರ ಮಾತಿಗೆ ಪ್ರತಿಕ್ರಿಯಿಸಲ್ಲವೆಂದು. ಆದರೆ, ಪದೇ ಪದೆ ಕಾಂಗ್ರೆಸ್ ಅವರನ್ನ ಟೀಕೆ ಮಾಡ್ತಾ ಹೊಗ್ತಿದ್ದಾರೆ. ಉಪ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ವೈಯಕ್ತಿಕ ಟೀಕೆ ಮಾಡುವುದು ಕುಮಾರಸ್ವಾಮಿ ಅವರಿಗೆ ಗೌರವ ತರುತ್ತಾ? ಎಂದು ಪ್ರಶ್ನೆ ಮಾಡಿದರು.
ನಾವು ಅವರನ್ನ ನೆಗ್ಲೇಟ್ ಮಾಡುವುದೊಂದೇ ದಾರಿ
ಮಾಜಿ ಪ್ರಧಾನಿ ಮಗ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ. ನಾವು ಅವರನ್ನ ನೆಗ್ಲೇಟ್ ಮಾಡುವುದೊಂದೇ ದಾರಿ ಎಂದು ಹೇಳಿದರು.
ಜಮೀರ್ ಹಾಗೂ ಕುಮಾರಸ್ವಾಮಿ ಇಬ್ಬರು ಕುಚುಕು ಗೆಳೆಯರು
ಕುಮಾರಸ್ವಾಮಿ ಜಮೀರ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರಿಬ್ಬರೂ ಸ್ನೇಹಿತರು. ವೈಯಕ್ತಿಕವಾಗಿ ಕುಚುಕು ಗೆಳೆಯರು. ಇವರದ್ದು ಅವರಿಗೆ ಗೊತ್ತು. ಅವರದ್ದು ಇವರಿಗೆ ಗೊತ್ತು. ಒಂದೇ ವೇದಿಕೆಯಲ್ಲಿ ಕರೆದು ಹೇಳಿ. ಜಮೀರ್ ಬಗ್ಗೆ ಕುಮಾರಸ್ವಾಮಿಗೆ ಗೊತ್ತಿರುವಷ್ಟು, ಕುಮಾರಸ್ವಾಮಿ ಬಗ್ಗೆ ಜಮೀರ್ಗೆ ಗೊತ್ತಿರುವಷ್ಟು ನನಗೆ ಗೊತ್ತಿಲ್ಲ ಎಂದರು.
ಫಾರೆಸ್ಟ್ ಲ್ಯಾಂಡ್ ಮಾಡಿಕೊಡ್ತೇವೆ ಎಂದು ಜನರ ಬಳಿ ದುಡ್ಡು ಕಲೆಕ್ಟ್ ಮಾಡ್ತಿದ್ದಾರೆ
ಗೋಮಾಳದ ವಿಚಾರವಾಗಿ ನಾಗಮಂಗಲದಲ್ಲಿ ಹೆಚ್ಚು ಡ್ಯಾಮೇಜ್ ಆಗ್ತಿದೆ. ಗೋಮಾಳ ಮಾಡಿಕೊಡ್ತೇವೆ, ಫಾರೆಸ್ಟ್ ಲ್ಯಾಂಡ್ ಮಾಡಿಕೊಡ್ತೇವೆ ಎಂದು ಜನರ ಬಳಿ ಹಣ ಕಲೆಕ್ಟ್ ಮಾಡ್ತಿದ್ದಾರೆ. ಜನರ ದಾರಿ ತಪ್ಪಿಸಿ ತಾಲೂಕು ಆಡಳಿತದಿಂದ ದುಡ್ಡು ವಸೂಲಿ ಮಾಡ್ತಿದ್ದಾರೆ ಎಂದು ಶಾಸಕ ಸುರೇಶ್ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದರು.
ನಾವೇ ಪಶ್ಚಾತ್ತಾಪ ಪಡಬೇಕು
ಜಿಲ್ಲಾಧಿಕಾರಿ ಬಳಿ ಕ್ರಮ ವಹಿಸುವಂತೆ ಮಾತನಾಡಿದ್ದೇನೆ. ಏನು ಮಾಡುವುದಕ್ಕೆ ಆಗಲ್ಲ. 5 ವರ್ಷ ಕಾಯಬೇಕು. ನಾವು ಮಾಡಿಕೊಳ್ಳೊ ಕೆಲಸದಿಂದ ನಾವೇ ಪಶ್ಚಾತ್ತಾಪ ಪಡಬೇಕು. ಭ್ರಷ್ಟಾಚಾರದ ಬಗ್ಗೆ ಒಂದೇ ಪಕ್ಷದವರು ಮಾತನಾಡ್ತಿದ್ದಾರೆ. ಶಿವರಾಮೇಗೌಡ, ಸುರೇಶ್ ಗೌಡ, ಅಪ್ಪಾಜಿಗೌಡ, ಶ್ರೀಕಂಠೇಗೌಡ ಅವರನ್ನ ಕರೆಸಿ ಕೇಳಬೇಕು ಎಂದರು.
ಓದಿ: ಚುನಾವಣಾ ಪ್ರಚಾರದಲ್ಲಿ ಮೈಮರೆಯದೇ ರಸಗೊಬ್ಬರ ಕೊರತೆ ನೀಗಿಸಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ