ETV Bharat / state

Cauvery water dispute: ರಾಜ್ಯದ ಬರ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಎಡವಿದೆ: ಹೆಚ್​ಡಿಕೆ ಆರೋಪ, ಮಂಡ್ಯ ಬಂದ್​ಗೆ ಉತ್ತಮ ಪ್ರತಿಕ್ರಿಯೆ

Former Chief Minister HD Kumaraswamy: ''ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಇದರಿಂದ ಬೇಸತ್ತ ರೈತಪರ, ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿವೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗರಂ ಹೇಳಿದರು.

Cauvery water dispute
ರಾಜ್ಯದ ಬರ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ಎಡವಿದ ಸರ್ಕಾರ: ಹೆಚ್​ಡಿಕೆ ಗರಂ, ಮಂಡ್ಯ ಬಂದ್​ಗೆ ಉತ್ತಮ ಪ್ರತಿಕ್ರಿಯೆ..
author img

By ETV Bharat Karnataka Team

Published : Sep 23, 2023, 8:03 PM IST

Updated : Sep 23, 2023, 8:50 PM IST

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ''ರಾಜ್ಯ ಸರ್ಕಾರ ನಮ್ಮ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಹಾಗೂ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದ ಹಿನ್ನೆಲೆ ಕರುನಾಡಿಗೆ ಕಾವೇರಿ ನೀರಿನ ಸಂಕಷ್ಟ ಎದುರಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯ ಮಾಜಿ ಸಚಿವರು ಹಾಗೂ ಶಾಸಕರೊಂದಿಗೆ ಕನ್ನಂಬಾಡಿ ಅಣೆಕಟ್ಟು ವೀಕ್ಷಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಪ್ರಾಧಿಕಾರವು ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ಬಿಡಬೇಕು ಎಂದು ಆದೇಶಿಸಿದೆ. ನಮ್ಮವರು ಈ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ. ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳು 15 ಜನ ಇರ್ತಾರೆ. ಸಭಾತ್ಯಾಗ ಮಾಡಿ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ನಮ್ಮವರಿಗೆ ನೀವು ನೀರು ಬಿಡಬೇಡಿ, ನಾವು ಕೋರ್ಟ್‌ಗೆ ಹೋಗೋಣಾ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೆ. ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಲು ತಿಳಿಸಿದ್ದೆ. ನಮಗೆ ಪೇಪರ್, ಪೆನ್ ಕೊಡಿ ನಿಮ್ಮನ್ನು ಉಳಿಸುತ್ತೇವೆ ಎಂದು ನೀರಾವರಿ ಸಚಿವರು ಕೇಳಿದ್ರು. ರೈತರು ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಆದ್ರೆ, ಇದೀಗ ರೈತರೇ ಕೋರ್ಟ್‌ಗೆ ಹೋಗಿ ಅಂತಾರೆ, ಇದು ಸರ್ಕಾರದ ನಡೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ರೈತರ ಬೆಳೆ ಉಳಿಸಿಕೊಳ್ಳಲು ನೀರಿನ ಅನಿವಾರ್ಯತೆ ಇದೆ. ಐದು ವರ್ಷಕ್ಕೊಮ್ಮೆ ಈ ರೀತಿ ಬರ ಪರಿಸ್ಥಿತಿ ಎದುರಾಗುತ್ತದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಇದರಿಂದ ಬೇಸತ್ತ ರೈತಪರ, ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿವೆ'' ಎಂದರು.

''ಕಳೆದ ಒಂದು ತಿಂಗಳಿನಿಂದ ತಮಿಳುನಾಡಿಗೆ ಹರಿದು ಹೋಗಿರುವ ನೀರನ್ನು ನಿಲ್ಲಿಸಿದ್ರೆ, ನಮ್ಮ ರೈತರನ್ನು ಉಳಿಸಬಹುದಿತ್ತು. ಆದ್ರೆ ಇವರು ಪ್ರಾಧಿಕಾರ ಹೇಳಿದ ತಕ್ಷಣ ನೀರು ಬಿಟ್ಟರು. ಕೋರ್ಟ್ ನಮ್ಮ ಮುಂದೆ ಬರಬೇಡಿ, ನೀವು ಕೂತು ತೀರ್ಮಾನ ಮಾಡಿಕೊಳ್ಳಿ ಅಂತಾ ತಿಳಿಸಿದೆ. ನ್ಯಾಯಾಂಗ ನಿಂದನೆ ಬೆದರಿಕೆಯಿಂದ ಇವರು ನೀರು ಹರಿಸಲು ಮುಂದಾಗಿದ್ದಾರೆ. ಇದು ಸರಿಯಲ್ಲ'' ಎಂದು ಗರಂ ಆದರು.

''2013ರಲ್ಲಿ ಜ್ಞಾನಿಚಂದ್ ಎಂಬಾತ ಸುಪ್ರೀಂಕೋರ್ಟ್‌ಗೆ ಆಂಧ್ರ ಪ್ರದೇಶದ ನೀರಾವರಿ ವಿಚಾರವಾಗಿ ಅರ್ಜಿ ಹಾಕಿದ್ದ. ಅಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಎಂದು ಹೇಳಿದ್ರು. ಆಗ ಪಾಲಿಸಲಾಗದ ಆದೇಶವನ್ನು ಪಾಲಿಸಲು ಆಗದೇ ಇರುವುದು, ನ್ಯಾಯಾಂಗ ನಿಂದನೆ ಆಗಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು. ಇದನ್ನು ಉದಾಹರಣೆ ತೆಗೆದುಕೊಂಡು ರಾಜ್ಯ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು'' ಎಂದು ಸಲಹೆ ನೀಡಿದರು.

''ತಮಿಳುನಾಡಿನ ಅಧಿಕಾರಿಗಳು ದಾಖಲೆ ಸಮೇತ ಸಭೆಗೆ ಹೋಗ್ತಾರೆ. ನಮ್ಮವರು ವರ್ಚುವಲ್ ಮೀಟಿಂಗ್‌ನಲ್ಲಿ ಕೂರುತ್ತಾರೆ. ತಮಿಳುನಾಡು ಅಧಿಕ ಪ್ರಮಾಣದಲ್ಲಿ ಕೃಷಿ ಭೂಮಿ ವಿಸ್ತಾರ ಮಾಡಿಕೊಂಡಿದೆ. ಇದು ಕಾನೂನು ಬಾಹಿರ. ಈ ವಿಚಾರವನ್ನು ನಮ್ಮ ಅಧಿಕಾರಿಗಳು ಪ್ರಶ್ನೆಯೇ ಮಾಡಿಲ್ಲ'' ಎಂದರು.

''2007ರಲ್ಲಿ ಅಂತಿಮ ತೀರ್ಪು ಪ್ರಕಟವಾಯಿತು. ಆಗ ನಾನು ಸಿಎಂ ಆಗಿದ್ದೆ. ಆಗ ನಾವು ಹೆಚ್ಚುವರಿ ನೀರು ಬೇಕು ಅಂತಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದೆವು. ಆಗ ನಮಗೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಯಿತು. ನಮ್ಮ ರಾಜ್ಯದಲ್ಲಿ ಹಲವು ನಿವೃತ್ತ ಮುಖ್ಯ ನ್ಯಾಯಾಧೀಶರಿದ್ದು, ಅವರ ಸಲಹೆಗಳನ್ನು ಸ್ವೀಕರಿಸಬೇಕು. ಅವರ ಜೊತೆ ಚರ್ಚಿಸಿ ಕೋರ್ಟಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬೇಕು'' ಎಂದು ತಿಳಿಸಿದರು.

ಮಂಡ್ಯ ಬಂದ್​ಗೆ ವ್ಯಾಪಕ ಬೆಂಬಲ: ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್​ಗೆ ಜಿಲ್ಲೆಯಾದ್ಯಂತ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಮಂಡ್ಯ ನಗರವು ಸಂಪುರ್ಣವಾಗಿ ಬಂದ್ ಆಗಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಬಂದ ಹೋರಾಟಗಾರರು ಕಾವೇರಿ ಹೋರಾಟದಲ್ಲಿ ಭಾಗಿಯಾದರು.

ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಮುಂಭಾಗ ನಡೆದ ಹೋರಾಟದಲ್ಲಿ ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಮುಖಂಡರು ಹೋರಾಟದಲ್ಲಿ ಭಾಗವಹಿಸಿದ್ದರು. ಬಿಜೆಪಿ ಮುಖಂಡ ಸಿ ಟಿ ರವಿ, ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎಂ ಎಸ್ ಆತ್ಮಾನಂದ, ಜೆಡಿಎಸ್ ಪಕ್ಷದ ಮಾಜಿ ಶಾಸಕ ಕೆ ಟಿ ಶ್ರೀಕಂಠೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ ಪಿ ಉಮೇಶ್ ಪಾಲ್ಗೊಂಡಿದ್ದರು.

ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಹೋರಾಟಕ್ಕೆ ಬರುತ್ತಿದ್ದವರನ್ನು ಪೊಲೀಸರು ತಡೆದಿದ್ದಾರೆ ಎಂದು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ ಸ್ಥಳದಲ್ಲಿ ಹೋರಾಟಗಾರರು ಪೊಲೀಸರ ವಿರುದ್ಧ ಕಿಡಿಕಾರಿದರು. ಅಲ್ಲದೇ ಎಮ್ಮೆ ಹಾಗೂ ನಾಯಿಗಳನ್ನು ಕರೆತಂದು ಹೋರಾಟ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಇದನ್ನೂ ಓದಿ: ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳು ರಾಜಕೀಯ ಆಯಾಮ ಕಲ್ಪಿಸುತ್ತಿವೆ: ಡಿ ಕೆ ಶಿವಕುಮಾರ್

Last Updated : Sep 23, 2023, 8:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.