ಮಂಡ್ಯ: ಸಿಎಂ ಕುಮಾರಸ್ವಾಮಿ ವಿರುದ್ಧ ಸ್ವಯಂಪ್ರೇರಿತವಾಗಿ ಪೊಲೀಸ್ ಇಲಾಖೆ ಎನ್ಸಿಆರ್ ದಾಖಲಿಸಿಕೊಂಡಿದೆ. ಎಫ್‌ಐಆರ್ ದಾಖಲಿಸಲು ಕೋರ್ಟ್ ಅನುಮತಿಗಾಗಿ ಕಾಯಲಾಗುತ್ತಿದ್ದೇವೆ ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧ ಸಿಎಂ ಪ್ರಚೋದನಕಾರಿ ಹೇಳಿಕೆ ಕುರಿತು ಈಗಾಗಲೇ ಎನ್ಸಿಆರ್ ಮಾಡಿಕೊಂಡಿದ್ದೇವೆ. ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದೇವೆ. ಕೋರ್ಟ್ ಅನುಮತಿ ಸಿಕ್ಕ ತಕ್ಷಣ ಎಫ್‌ಐಆರ್ ಹಾಕಲಾಗುವುದು ಎಂದರು.
ಪೊಲೀಸ್ ವಾಹನದಲ್ಲಿ ರೌಡಿ ಪ್ರಯಾಣಿಸಿದ ಪ್ರಕರಣ ಕುರಿತು ಈಗಾಗಲೇ ಮೇಲಾಧಿಕಾರಿಗಳು ವರದಿ ಕೇಳಿದ್ದರು. ಪ್ರಕರಣ ಸಂಬಂಧ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದೇವೆ. ಅದು ನಮ್ಮ ಜಿಲ್ಲೆಯ ವಾಹನವೂ ಅಲ್ಲ, ಅವರು ಮಂಡ್ಯ ಜಿಲ್ಲೆಯ ಅಧಿಕಾರಿಗಳೂ ಅಲ್ಲ. ಮೇಲಾಧಿಕಾರಿಗಳು ಕೇಳಿದ್ದಕ್ಕೆ ವರದಿ ನೀಡಿದ್ದೇವೆ ಎಂದರು. ರೌಡಿ ಶೀಟರ್ ಪ್ರಕಾಶ್ ವಿರುದ್ಧ ಸೆಕ್ಷನ್ 107ರ ಅಡಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಬಾಂಡ್ ಮೂಲಕ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.