ಮಂಡ್ಯ : ತಾಲ್ಲೂಕಿನ ಬಿ. ಹೊಸೂರು ಕಾಲೊನಿಯಲ್ಲಿ ಎಚ್. ಮಲ್ಲಿಗೆರೆ ಗ್ರಾಮಸ್ಥರು ಬೀರೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಹಿರಿಯಮ್ಮ ಮತ್ತು ಏಳೂರಮ್ಮ ದೇವರ ಹಬ್ಬದ ಪ್ರಯುಕ್ತ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು 50 ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿದ್ದವು. ಆಯೋಜಕರು ಸ್ಪರ್ಧೆ ನಡೆಸಲು ಎಸ್ಪಿ, ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆದು ಸಿದ್ಧತೆ ಮಾಡಿಕೊಂಡಿದ್ದರು.
ಎತ್ತಿನಗಾಡಿ ಓಟದ ಸ್ಪರ್ಧೆ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಗಾಡಿ ಓಟದಲ್ಲಿದ್ದ ಜನ ಕೂಗುವ ಮೂಲಕ ಯುವಕರಿಗೆ ಹುರಿದುಂಬಿಸಿದರು. ಪಂದ್ಯದಲ್ಲಿ ಗೆದ್ದವರಿಗೆ ಗ್ರಾಮದ ಯುವಕರು ವಿಶೇಷ ಬಹುಮಾನ ನೀಡಿದರು.