ಮಂಡ್ಯ : ಪತ್ನಿಯೇ ತನ್ನ ಕಳ್ಳ ಪತಿಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ದೊಡ್ಡಪಾಳ್ಯ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಧು ತನ್ನ ಪತ್ನಿಯಿಂದ ಪೊಲೀಸರ ಅತಿಥಿಯಾದ ವ್ಯಕ್ತಿ. ಈತ ಹಲವು ವರ್ಷಗಳಿಂದ ಬೈಕ್ ಕಳ್ಳತನದಲ್ಲಿ ತೊಡಗಿದ್ದನೆಂದು ತಿಳಿದುಬಂದಿದೆ. ಬಂಧಿತನಿಂದ ಸುಮಾರು 3 ಲಕ್ಷ ಮೌಲ್ಯದ 10 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
![bike-theft-case-in-mandya-police-arrested-the-accused](https://etvbharatimages.akamaized.net/etvbharat/prod-images/14813471_yy.jpg)
ಬೈಕ್ ಕಳ್ಳತನದ ವಿಚಾರವಾಗಿ ಗಂಡ-ಹೆಂಡತಿ ನಡುವೆ ಹಲವು ಬಾರಿ ಜಗಳಗಳು ನಡೆದಿತ್ತಂತೆ. ಹೆಂಡತಿ ಎಷ್ಟೇ ತಿಳಿ ಹೇಳಿದರೂ ಮಧು ಮಾತ್ರ ಕಳ್ಳತನವನ್ನು ಬಿಟ್ಟಿರಲಿಲ್ಲ. ಇದರಿಂದ ಬೇಸತ್ತ ಪತ್ನಿ ತನ್ನ ಗಂಡ ಮಧುನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾಳೆಂದು ತಿಳಿದು ಬಂದಿದೆ.
ಆರೋಪಿಯು ಮಂಡ್ಯ ನಗರದ ಹಲವು ಕಡೆಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ತನಿಖೆಯಿಂದ ಗೊತ್ತಾಗಿದೆ. ಅಲ್ಲದೆ ಪತ್ನಿ ಸೌಮ್ಯ ಮನೆಯಲ್ಲೂ 1 ಲಕ್ಷ ರೂ. ಕಳವು ಮಾಡಿದ್ದ ಎಂದು ದೂರಲಾಗಿದೆ. ಆರೋಪಿ ಮಧು ತನ್ನ ಪತ್ನಿ ಮನೆಗೆ ಬಂದಾಗ ಅರಕೆರೆ ಪೊಲೀಸರು ಬಂಧಿಸಿದ್ದು, ಸದ್ಯ ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಓದಿ : ವೈದ್ಯಕೀಯ ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರ, ನಾಲ್ವರು ಬಾಲಾಪರಾಧಿಗಳ ಬಂಧನ