ETV Bharat / state

Bengaluru-Mysuru Expressway: ಜುಲೈ 1ರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ 2ನೇ ಟೋಲ್ ಆರಂಭ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಎರಡನೇ ಟೋಲ್ ಪ್ರಾರಂಭವಾಗಲಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ
author img

By

Published : Jun 28, 2023, 7:56 PM IST

Updated : Jun 29, 2023, 3:09 PM IST

ಮಂಡ್ಯ : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಇನ್ನು ಮುಂದೆ ಮತ್ತೊಂದು ಟೋಲ್​ ಪಾವತಿಸಬೇಕಾಗಿದೆ. ಈಗಾಗಲೇ ರಾಮನಗರ ಜಿಲ್ಲೆಯ ಕಣಮಿಣಕಿ ಟೋಲ್ ಆರಂಭವಾಗಿದೆ. ಈ ಟೋಲ್‌ನಲ್ಲಿ ಒಂದು ಕಾರಿಗೆ ಏಕಮುಖ ಸಂಚಾರಕ್ಕೆ 165 ರೂ. ವಸೂಲಿ ಮಾಡಲಾಗುತ್ತಿದೆ. ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಎರಡನೇ ಹಂತದ ಟೋಲ್ ಜುಲೈ 1 ರಿಂದ ಆರಂಭವಾಗಲಿದೆ.

ಎರಡನೇ ಟೋಲ್ ಪ್ರಾರಂಭ
ಎರಡನೇ ಟೋಲ್ ಪ್ರಾರಂಭ

ಉದಾಹಾರಣೆಗೆ.. : ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುವವರು ಮೊದಲಿಗೆ ಗಣಂಗೂರು ಟೋಲ್‌ನಲ್ಲಿ 155 ರೂ. ಕಟ್ಟಬೇಕು. ಇದಾದ ಬಳಿಕ ಕಣಮಿಣಕಿ ಟೋಲ್‌ನಲ್ಲಿ 165 ರೂ. ಪಾವತಿ ಮಾಡಬೇಕು. ಏಕಮುಖ ಸಂಚಾರಕ್ಕೆ 320 ರೂ. ಟೋಲ್ ದರ ಇರುತ್ತದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲವೆಂದರೆ ಈ ಹಣ ದುಪ್ಪಟ್ಟು ಆಗಲಿದೆ. ಜುಲೈ 1ರಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭವಾಗಲಿದ್ದು, ಜಿಲ್ಲೆಯ 55.134 ಕಿಮೀ ವ್ಯಾಪ್ತಿಗೆ ಟೋಲ್ ಆಗಿದೆ‌.

ಎರಡನೇ ಟೋಲ್​ ಶುಲ್ಕದ ವಿವರ :

  • ಕಾರು, ಜೀಪು, ವ್ಯಾನ್ - 155 ರೂ.
  • ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ ಮಿನಿ ಬಸ್ - 250 ರೂ.
  • ಟ್ರಕ್/ಬಸ್ (ಎರಡು ಆಕ್ಸೆಲ್ ಗಳದ್ದು) 525 ರೂ.
  • ಮೂರು ಆಕ್ಸೆಲ್ ವಾಣಿಜ್ಯ ವಾಹನ - 575 ರೂ.
  • ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸಲ್ ಗಳದ್ದು) - 825 ರೂ.
  • ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) - 1005 ರೂ.

ಅದೇ ದಿನ ವಾಪಸಾದರೆ ಶುಲ್ಕವೆಷ್ಟು? :

  • ಕಾರು, ಜೀಪು, ವ್ಯಾನ್ - 235 ರೂ.
  • ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ - 375 ರೂ.
  • ಟ್ರಕ್/ಬಸ್ (ಎರಡು ಆಕ್ಸೆಲ್ ಗಳದ್ದು) 790 ರೂ.
  • ಮೂರು ಆಕ್ಸೆಲ್ ವಾಣಿಜ್ಯ ವಾಹನ - 860 ರೂ.
  • ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಕ್ ವಾಹನ (4ರಿಂದ 6 ಆಕ್ಸೆಲ್ ಗಳದ್ದು) - 1240 ರೂ.
  • ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್ ಗಳದ್ದು) - 1510 ರೂ.

ಮಂಡ್ಯ ಜಿಲ್ಲೆಯೊಳಗೆ ಸಂಚಾರಕ್ಕೆ ಶುಲ್ಕವೆಷ್ಟು? :

  • ಕಾರು, ಜೀಪು, ವ್ಯಾನ್ - 80 ರೂ.
  • ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ - 125 ರೂ.
  • ಟ್ರಕ್/ಬಸ್ (ಎರಡು ಆಕ್ಸೆಲ್ ಗಳದ್ದು) 265 ರೂ.
  • ಮೂರು ಆಕ್ಸೆಲ್ ವಾಣಿಜ್ಯ ವಾಹನ - 285 ರೂ.
  • ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸೆಲ್ ಗಳದ್ದು) - 415 ರೂ.
  • ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್ ಗಳದ್ದು) - 505 ರೂ.

ಇದನ್ನೂ ಓದಿ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ರೇಸಿಂಗ್ ಟ್ರ್ಯಾಕ್ ಅಲ್ಲ; ಅಪಘಾತಗಳಿಗೆ ಚಾಲಕರ ಬೇಜವಾಬ್ದಾರಿ ಕಾರಣ- ಪ್ರತಾಪ್ ಸಿಂಹ

Last Updated : Jun 29, 2023, 3:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.