ಮಂಡ್ಯ: ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದಲ್ಲಿ ಬಂಡೂರು ಟಗರು 1 ಲಕ್ಷದ 91 ಸಾವಿರ ರೂಪಾಯಿಗೆ ಮಾರಾಟವಾಗಿ ಹುಬ್ಬೇರಿಸಿತು.
ದೇವಿಪುರ ಗ್ರಾಮದ ಸಣ್ಣಪ್ಪ ಎಂಬವರು ಈ ಟಗರು ಮಾರಿದ ವ್ಯಕ್ತಿ. ಇವರು ಕಳೆದೆರಡು ವರ್ಷದ ಹಿಂದೆ 1 ಲಕ್ಷದ 5 ಸಾವಿರಕ್ಕೆ ಈ ಟಗರು ಖರೀದಿಸಿದ್ದರು. ಅದೇ ಟಗರನ್ನು ಇಂದು ದುಬಾರಿ ಮೌಲ್ಯಕ್ಕೆ ಬಿದರಕೋಟೆ ಕೃಷ್ಣಪ್ಪ ಎಂಬುವರಿಗೆ ಮಾರಾಟ ಮಾಡಿ ಗಮನ ಸೆಳೆದರು.
ಪೂಜೆ ಮಾಡಿ, ಹಾರ ಹಾಕಿ ದೇವಿಪುರ ಸೇರಿದಂತೆ ನಾಲ್ಕೈದು ಗ್ರಾಮಗಳಲ್ಲಿ ಟಗರಿನ ಮೆರವಣಿಗೆ ಮಾಡಿದ್ದಾರೆ. ಮಾರಾಟದಲ್ಲಿ ದಾಖಲೆ ನಿರ್ಮಿಸಿದ ಟಗರನ್ನು ನೋಡಲು ಜನರ ದಂಡೇ ಆಗಮಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ಅಗಲಿದ ಮಡದಿ ಪತಿಯ ಮನದಲ್ಲಿ ಜೀವಂತ.. ಮನೆಯಲ್ಲೇ ಪತ್ನಿಯ ಮೂರ್ತಿ ಪ್ರತಿಷ್ಠಾಪಿಸಿದ ಗಂಡ