ETV Bharat / state

ಸೆಸ್ಕ್​ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ: ಆರೋಪಿಯ ಬಂಧನ - mandya illegal-power-connection

ಮನೆಗೆ ಅಕ್ರಮ ವಿದ್ಯುತ್​​ ಸಂಪರ್ಕ ಪಡೆದಿದ್ದನ್ನು ಪ್ರಶ್ನಿಸಿದ ಸೆಸ್ಕ್​ ಸಿಬ್ಬಂದಿಯ ಮೇಲೆ ಕುಡುಗೋಲಿನಿಂದ ಹಲ್ಲೆಗೆ ಯತ್ನಿಸಿದವನನ್ನು ಕೆಸ್ತೂರು ಪೊಲೀಸರು ಬಂಧಿಸಿದ್ದಾರೆ.

ಮಾರಕಾಸ್ತ್ರ ದಾಳಿ
ಮಾರಕಾಸ್ತ್ರ ದಾಳಿ
author img

By

Published : Dec 23, 2020, 6:21 PM IST

Updated : Dec 23, 2020, 8:28 PM IST

ಮಂಡ್ಯ: ಮದ್ದೂರು ತಾಲೂಕಿನ ಮಾಚಹಳ್ಳಿಯಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಪ್ರಶ್ನಿಸಿ ಕಡಿತಕ್ಕೆ ಮುಂದಾದ ಸಿಬ್ಬಂದಿ ಮೇಲೆ ಕುಡುಗೋಲಿನಿಂದ ಹಲ್ಲೆಗೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಕೆಸ್ತೂರು ಪೊಲೀಸರು ಬಂಧಿಸಿದ್ದಾರೆ.

ಇದೇ ಗ್ರಾಮದ ಬಿಲ್ಲಯ್ಯ ಹಲ್ಲೆಗೆ ಯತ್ನಿಸಿದ ವ್ಯಕ್ತಿ. ಈತ ತನ್ನ ಮನೆಗೆ ಅಕ್ರಮ ವಿದ್ಯುತ್​​ ಸಂಪರ್ಕ ಪಡೆದಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಕಡಿತಕ್ಕೆ ಮುಂದಾದ ಸೆಸ್ಕ್​​ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುಡುಗೋಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಭಯಭೀತರಾದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿ ತಮ್ಮ ರಕ್ಷಣೆಗೆ ಮನವಿ ಮಾಡಿದ್ದಾರೆ.

ಸೆಸ್ಕ್​ ಸಿಬ್ಬಂದಿ ಮೇಲೆ ಮಾರಕಾಸ್ತ್ರ ದಾಳಿಗೆ ಯತ್ನ

ವಿದ್ಯುತ್​ ಸಂಪರ್ಕ ಕಡಿತಗೊಳಿಸಲು ತೆರಳಿದ್ದ ಸೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಯತ್ನ

ಇನ್ನು ಬೆದರಿಕೆ ಹಿನ್ನೆಲೆ ಮನೆ ಮಾಲೀಕ ಬಿಲ್ಲಯ್ಯ, ಜಯಬೋರಮ್ಮ ಎಂಬುವರ ವಿರುದ್ಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

Last Updated : Dec 23, 2020, 8:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.