ಮಂಡ್ಯ: ಜಿಲ್ಲೆಯಲ್ಲಿ ಆರು ವರ್ಷದ ಬಾಲಕ ಸೇರಿ ಮತ್ತೆ ನಾಲ್ಕು ಜನರಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 34ಕ್ಕೆ ಏರಿದೆ.
ಮುಂಬೈ ಪ್ರವಾಸ ಕೈಗೊಂಡಿದ್ದ ನಾಲ್ಕು ಮಂದಿಗೆ ಸೋಂಕು ತಗುಲಿದೆ. P-961, P-962, P-963, P-964 ಸೋಂಕು ದೃಢಪಟ್ಟಿದ್ದು,ಇದರಲ್ಲಿ P-963 ರೋಗಿ ಆರು ವರ್ಷದ ಬಾಲಕನಾಗಿದ್ದಾನೆ.

ಸದ್ಯ, ಮುಂಬೈ ಸೋಂಕು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದು,ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.