ETV Bharat / state

ಮಗ ನಿಖಿಲ್​ ಪರ ಮತಯಾಚನೆಗೆ ಮುಂದಾದ ಅನಿತಾ ಕುಮಾರಸ್ವಾಮಿ

author img

By

Published : Apr 1, 2019, 9:27 PM IST

ಇಂದು ಮಂಡ್ಯದಲ್ಲಿ ಮಹಿಳಾ ಮುಖಂಡರ ಸಭೆ ಕರೆದ ಅನಿತಾ ಕುಮಾರಸ್ವಾಮಿಯವರು ಮಗ ನಿಖಿಲ್​ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡಿದರು. ಅಲ್ಲದೆ ಸುಮಲತಾ ಅವರ ಟೀಕೆ, ಆರೋಪಗಳಿಗೆ ಪ್ರತಿಕ್ರಿಯಿಸಿದರು.

ಅನಿತಾ ಕುಮಾರಸ್ವಾಮಿ

ಮಂಡ್ಯ: ಮಗ ನಿಖಿಲ್​ ಪರವಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರಚಾರಕಲ್ಕೆ ಧುಮುಕಿದ್ದಾರೆ. ಮಹಿಳಾ ಮುಖಂಡರ ಸಭೆ ಮಾಡಿ ಪುತ್ರನ ಪರ ಮತಯಾಚಿಸಿದರು.

ನಗರದ ವರ್ಧಮಾನ್ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಟೀಕೆ, ಆರೋಪಗಳಿಗೆ ನಾವು ಉತ್ತರ ಕೊಡಲ್ಲ. ನಾವು ಬೇರೆಯವರ ಮೇಲೆ ಆರೋಪ, ಟೀಕೆ ಮಾಡಲ್ಲ. ಅಧಿಕಾರಿಗಳನ್ನ ಕೆಲಸ ಮಾಡೋಕೆ ಬಿಡಬೇಕು. ಅವರು ಒಬ್ಬರ ಪರ ಯಾಕೆ ಕೆಲಸ ಮಾಡ್ತಾರೆ. ಅವರಿಗೂ ಜವಾಬ್ದಾರಿ ಅನ್ನೋದು ಇರುತ್ತೆ. ಈ ರೀತಿ ಆರೋಪ ಯಾರೇ ಮಾಡಿದ್ರೂ ತಪ್ಪು ಎಂದು ಅಧಿಕಾರಿಗಳ ಪರ ಬ್ಯಾಟಿಂಗ್ ಬೀಸಿದರು.

ಅನಿತಾ ಕುಮಾರಸ್ವಾಮಿ

ನಿಖಿಲ್ ಅಫಿಡವಿಟ್ ಗೊಂದಲ ಆರೋಪ ಕುರಿತು ಪ್ರಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಅವೆಲ್ಲ ಸುಳ್ಳು ಆರೋಪಗಳು. ಅದನ್ನೇ ಹೆಚ್ಚು ಕೆದಕೋಕೆ ಹೋಗ್ಬೇಡಿ. ಅರ್ಜಿಯಲ್ಲಿ ಎಲ್ಲವೂ ಸರಿಯಾಗಿಯೆ ಇದೆ. ಅಧಿಕಾರಿಗಳು ಸಮರ್ಥವಾಗಿದ್ದಾರೆ. ಅವರನ್ನು ಕೆಲಸ ಮಾಡೋಕೆ ಬಿಡಿ ಎಂದರು.

ನಿಖಿಲ್ ಹೆಸರು ಗೊಂದಲ ವಿಚಾರವಾಗಿ ಮಾತನಾಡಿ, ಕೆ ಅಂದ್ರೆ ಕುಮಾರಸ್ವಾಮಿ ಅಂತ. ಹಾಗಾಗಿಯೇ ನಿಖಿಲ್. ಕೆ ಎಂದು ಕೊಟ್ಟಿದ್ದೇವೆ. ಇದನ್ನು ಲಾಯರ್, ಆಡಿಟರ್ ಹೇಳಬೇಕು. ಸುಮ್ಮನೆ ಎಲ್ಲದರಲ್ಲೂ ತಪ್ಪು ಹುಡುಕುವುದು ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕುವಂತ ಕೆಲಸ ಆಗಬಾರದು.ನಾವು ಜಿಲ್ಲೆಯ ಜನಕ್ಕಾಗಿ, ಅಭಿವೃದ್ಧಿಗಾಗಿ ಮತ ಕೇಳೋಕೆ ಬಂದಿದ್ದೇವೆ. ಅವರು ಹೇಳೋದಕ್ಕೆಲ್ಲ ನೀವು ಹೆಚ್ಚು ಮಹತ್ವ ಕೊಡ್ತಿದ್ದೀರಾ ಎಂದು ಮಾಧ್ಯಮದವರ ಮೇಲೆ ಗರಂ ಆದರು.

ಜೆಡಿಎಸ್ ರೈತ ವಿರೋಧಿ ಪಕ್ಷ ಎಂಬುದನ್ನು ರೈತರು ಹೇಳಬೇಕು. ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಯಾರು?ಜನರ ಬಗ್ಗೆ ಮಾತಾಡೋಕೆಅವರಿಗೇನು ಬದ್ಧತೆ ಇದೆ ಪ್ರಶ್ನಿಸಿದರು.

ಸಿನಿಮಾ ನಟರ ಮೇಲೆ ಶಾಸಕ ಶ್ರೀನಿವಾಸ್ ವಾಗ್ದಾಳಿ:
ಸಿನಿಮಾ ನಟರು ಇವತ್ತು ಬರ್ತಾರೆ, ನಾಳೆ ಹೋಗ್ತಾರೆ. ಜಿಲ್ಲೆಯ ರೈತರ ಜೊತೆ ಇರೋರು ಕುಮಾರಸ್ವಾಮಿ. ಜಿಲ್ಲೆಯಲ್ಲಿ ಅಷ್ಟೊಂದು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸಿನಿಮಾದವ್ರು ಬಂದಿದ್ರಾ ಎಂದು ಮಂಡ್ಯ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ರು.

Intro:ಮಂಡ್ಯ: ಪುತ್ರನ ಪರವಾಗಿ ಅಮ್ಮ ಅಖಾಡಕ್ಕೆ ಇಳಿದಿದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿ ಮಹಿಳಾ ಮುಖಂಡರ ಸಭೆ ಮಾಡಿ, ಪುತ್ರನ ಪರ ಮತಯಾಚನೆ ಮಾಡಿದರು.Body:ನಗರದ ವರ್ಧಮಾನ್ ಭವನದಲ್ಲಿ ನಡೆದ ಸಭೆಯಲ್ಲಿ, ನಡೆದ ಸಭೆಯಲ್ಲಿ ಮತಯಾಚನೆ ಮಾಡಿದರು. ಸಭೆಯಲ್ಲಿ ಮಹಿಳೆಯರು ಪಾಲ್ಗೊಂಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಟೀಕೆ, ಆರೋಪಿಗಳಿಗೆ ನಾವು ಉತ್ತರ ಕೊಡಲ್ಲ. ನಾವು ಬೇರೆಯವರ ಮೇಲೆ ಆರೋಪ, ಟೀಕೆ ಮಾಡಲ್ಲ. ಅಧಿಕಾರಿಗಳನ್ನ ಕೆಲಸ ಮಾಡೋಕೆ ಬಿಡಬೇಕು. ಅವರು ಒಬ್ಬರ ಪರ ಯಾಕೆ ಮಾಡ್ತಾರೆ. ಅವರಿಗೂ ಜವಾಬ್ದಾರಿ ಅನ್ನೋದು ಇರುತ್ತೆ. ಈ ರೀತಿ ಆರೋಪ ಯಾರೇ ಮಾಡಿದ್ರೂ ತಪ್ಪು ಎಂದು ಅಧಿಕಾರಿಗಳ ಪರ ಬ್ಯಾಟಿಂಗ್ ಮಾಡಿದರು.
ನಿಖಿಲ್ ಅಫಿಡವಿಟ್ ಗೊಂದಲ ಆರೋಪ ಕುರಿತು ಅದೆಲ್ಲಾ ಸುಳ್ಳು ಆರೋಪಗಳು. ಅದನ್ನೇ ಹೆಚ್ಚು ಕೆದಕೋಕೆ ಹೋಗ್ಬೇಡಿ. ಅರ್ಜಿಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದ ಅವರು, ಅಧಿಕಾರಿಗಳು ಸಮರ್ಥವಾಗಿದ್ದಾರೆ. ಅವರ ಕೆಲಸ ಮಾಡೋಕೆ ಬಿಡಬೇಕು ಎಂದರು.
ನಿಖಿಲ್ ಹೆಸರು ಗೊಂದಲ ವಿಚಾರವಾಗಿ, ಕೆ ಅಂದ್ರೆ ಕುಮಾರಸ್ವಾಮಿ ಅಂತಾ. ಹಾಗಾಗಿಯೇ ನಿಖಿಲ್ ಕೆ ಅಂತಾ ಕೊಟ್ಟಿದೆ. ಇದನ್ನು ಲಾಯರ್, ಆಡಿಟರ್ ಹೇಳಬೇಕು. ಸುಮ್ಮನೇ ಎಲ್ಲದರಲ್ಲೂ ತಪ್ಪು ಹುಡುಕುವುದು ಸರಿಯಲ್ಲ. ಅದು ಮೊಸರಲ್ಲಿ ಕಲ್ಲು ಹುಡುಕುವಂತ ಕೆಲಸ ಆಗಬಾರದು.
ಎಲ್ಲದರಲ್ಲೂ ತಪ್ಪು ಹುಡುಕುವಂತ ಕೆಲಸ ಆಗಬಾರದು ಎಂದರು.
ನಾವು ಯಾರನ್ನೂ ಟೀಕೆ ಮಾಡೋಕೆ ಬಂದಿಲ್ಲ. ಜಿಲ್ಲೆಯ ಜನಕ್ಕಾಗಿ, ಅಭಿವೃದ್ಧಿಗಾಗಿ ಮತ ಕೇಳೋಕೆ ಬಂದಿದ್ದೇವೆ. ಅವರು ಹೇಳೋದಕ್ಕೆಲ್ಲ ಹೆಚ್ಚು ಮಹತ್ವ ಕೊಡ್ತಿದ್ದೀರ. ಅದನ್ನು ನಿಲ್ಲಿಸಿದ್ರೆ ಅವರು ಮಾತಾಡೋದನ್ನೂ ನಿಲ್ಲಿಸ್ತಾರೆ ಎಂದರು.
ಟಿ.ಜೆ.ಅಬ್ರಾಹಂ ಹೇಳಿಕೆಗೆ ತಿರುಗೇಟು ನೀಡಿದ ಅನಿತಾ ಕುಮಾರಸ್ವಾಮಿ, ಜೆಡಿಎಸ್ ರೈತ ವಿರೋಧಿ ಪಕ್ಷ ಎಂಬುದನ್ನು ರೈತರು ಹೇಳಬೇಕು. ಅಬ್ರಾಹಂ ಯಾರು ಏನು ಬದ್ಧತೆ ಇದೆ ಜನರ ಬಗ್ಗೆ ಮಾತಾಡೋಕೆ ಎಂದು ಪ್ರಶ್ನೆ ಮಾಡಿದರು.
ಸಿನಿಮಾ ನಟರ ಮೇಲೆ ಶಾಸಕ ಶ್ರೀನಿವಾಸ್ ವಾಗ್ದಾಳಿ: ಸಿನಿಮಾ ನಟರು ಇವತ್ತು ಬರ್ತಾರೆ, ನಾಳೆ ಹೋಗ್ತಾರೆ. ಜಿಲ್ಲೆಯ ರೈತರ ಜೊತೆ ಇರೋರು ಕುಮಾರಸ್ವಾಮಿ. ಜಿಲ್ಲೆಯಲ್ಲಿ ಅಷ್ಟೊಂದು ರೈತರು ಆತ್ಮಹತ್ಯೆ ಮಾಡ್ಕೊಂಡ್ರಲ್ಲ ಬಂದಿದ್ರಾ ಎಂದು ಮಂಡ್ಯ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ವಾಗ್ದಾಳಿ ಮಾಡಿದರು.
ಪಕ್ಷೇತರ ಅಭ್ಯರ್ಥಿ ಯಾವತ್ತಾದ್ರು ಭೇಟಿ ನೀಡಿದ್ರಾ? ಹೋಗಲಿ ಅವರ ಪತಿ ಭೇಟಿ ಮಾಡಿ ಸಾಂತ್ವನ ಹೇಳಿದ್ರಾ. ಅಧಿಕಾರದಲ್ಲಿ ಇಲ್ಲದೇ ಹೋದ್ರೂ ಕುಮಾರಣ್ಣ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿದ್ದರು ಎಂದರು.
*ಕೊತ್ತತ್ತಿ ಯತೀಶ್ ಬಾಬು*Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.