ಮಂಡ್ಯ: ಒಂದೆಡೆ ತಂದೆ, ತಾತಾ ಪ್ರಚಾರ ಮಾಡಿದರೆ, ಮತ್ತೊಂದು ಕಡೆ ಅಮ್ಮ ಪುತ್ರನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಪುತ್ರನ ಗೆಲುವಿಗೆ ಪ್ರಾರ್ಥಿಸಿ ಶ್ರೀರಂಗಪಟ್ಟಣ ತಾಲೂಕಿನ ರಾಂಪುರ ಸೀತಾರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಅನಿತಾ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ರಾಮನವಮಿ ಅಂಗವಾಗಿ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲೇ ಇದ್ದ ಮಹಿಳೆಯರ ಬಳಿ ಮತಯಾಚನೆ ಮಾಡಿದರು ಎನ್ನಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ:
ದೇವಸ್ಥಾನದ ಆವರಣದಲ್ಲಿ ಮತಯಾಚನೆ ಮಾಡಬಾರದು ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ ಅನಿತಾ ಕುಮಾರಸ್ವಾಮಿ ದೇವರ ದರ್ಶನ ಮುಗಿಯುತ್ತಿದ್ದಂತೆ ಅಲ್ಲೇ ಪೂಜೆಗೆ ಬಂದಿದ್ದ ಮಹಿಳೆಯರ ಬಳಿ ಮತಯಾಚನೆ ಮಾಡಿದ್ದು, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.