ETV Bharat / state

ಫೈನಾನ್ಸ್​ನಿಂದ ಬೇರೆಯವರು ಪಡೆದ ಹಣ ಕಟ್ಟಲು ನಿರಾಕರಣೆ : ಮಹಿಳೆ ಮೇಲೆ ಹಲ್ಲೆ - ಪಾಂಡವಪುರ ಠಾಣೆ

ಅವರ ಉಳಿಕೆ ಸಾಲದ ಹಣವನ್ನ ಎಲ್ಲಾ ಮಹಿಳೆಯರು ಸೇರಿ ಕಟ್ಟುವಂತೆ ಫೈನಾನ್ಸ್​ನವರು ಒತ್ತಡ ಹಾಕಿದ್ದರು ಎನ್ನಲಾಗಿದೆ. ಅವರ ಸಾಲವನ್ನ ನಾವೇಕೆ ಕಟ್ಟಬೇಕು ಎಂದು ಪ್ರಶ್ನಿಸಿದ್ದಕ್ಕೆ, ಜಯಲಕ್ಷ್ಮಿ ಮೇಲೆ ಅನುಸೂಯ ಎಂಬುವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ..

an-assault-on-a-woman-in-mandya
ಫೈನಾನ್ಸ್​ನಿಂದ ಬೇರೆಯವರು ಪಡೆದ ಹಣ ಕಟ್ಟಲು ನಿರಾಕರಣೆ: ಮಹಿಳೆ ಮೇಲೆ ಹಲ್ಲೆ
author img

By

Published : Dec 18, 2020, 1:20 PM IST

ಮಂಡ್ಯ : ಖಾಸಗಿ ಫೈನಾನ್ಸ್​ನಿಂದ ಹಣ ಪಡೆದು ಪರಾರಿಯಾಗಿದ್ದ ಮಹಿಳೆಯ ಹಣವನ್ನ ಬೇರೊಬ್ಬ ಮಹಿಳೆ ಕಟ್ಟಲು ನಿರಾಕರಿಸಿದ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ಪಾಂಡವಪುರ ತಾಲೂಕಿನ ಕೆ.ಹೊಸೂರು ಗ್ರಾಮದಲ್ಲಿ ನಡೆದಿದೆ.

ಜಯಲಕ್ಷ್ಮಿ (40) ಎಂಬುವರು ಹಲ್ಲೆಗೊಳಗಾದವರಾಗಿದ್ದು, ಅದೇ ಗ್ರಾಮದ ಅನುಸೂಯ ಎಂಬುವರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಖಾಸಗಿ ಫೈನಾನ್ಸ್​ನಿಂದ ಗ್ರಾಮದ 20 ಮಹಿಳೆಯರು ತಲಾ ₹50 ಸಾವಿರದಂತೆ ಸಾಲ ಪಡೆದುಕೊಂಡಿದ್ದರು. ಹೀಗೆ ಸಾಲ ಪಡೆದಿದ್ದ ಅನಿತಾ ಎಂಬ ಮಹಿಳೆ ಸಾಲದ ಒಂದು ಕಂತನ್ನಷ್ಟೇ ಕಟ್ಟಿ ಊರು ಖಾಲಿ ಮಾಡಿದ್ದರು.

ಅವರ ಉಳಿಕೆ ಸಾಲದ ಹಣವನ್ನ ಎಲ್ಲಾ ಮಹಿಳೆಯರು ಸೇರಿ ಕಟ್ಟುವಂತೆ ಫೈನಾನ್ಸ್​ನವರು ಒತ್ತಡ ಹಾಕಿದ್ದರು ಎನ್ನಲಾಗಿದೆ. ಅವರ ಸಾಲವನ್ನ ನಾವೇಕೆ ಕಟ್ಟಬೇಕು ಎಂದು ಪ್ರಶ್ನಿಸಿದ್ದಕ್ಕೆ, ಜಯಲಕ್ಷ್ಮಿ ಮೇಲೆ ಅನುಸೂಯ ಎಂಬುವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಜಯಲಕ್ಷ್ಮಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.