ಮಂಡ್ಯ : ಓವರ್ ಟೇಕ್ ಮಾಡಲು ಹೋಗಿ ಆ್ಯಂಬುಲೆನ್ಸ್ ಚರಂಡಿಗೆ ಸಿಲುಕಿದ ಘಟನೆ ಮದ್ದೂರು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇಂದು ಸಂಭವಿಸಿದೆ.
ಚೆನ್ನಪಟ್ಟಣದಿಂದ ಮಂಡ್ಯ ಮೆಡಿಕಲ್ ಕಾಲೇಜಿಗೆ ಜೇನು ಕಡಿತಕ್ಕೊಳಗಾಗಿದ್ದ ರೋಗಿಯನ್ನು ಕೂರಿಸಿಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಚರಂಡಿಗೆ ಬಿದ್ದು ಸಿಲುಕಿದೆ. ಮದ್ದೂರಿನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ಚರಂಡಿಗೆ ಆ್ಯಂಬುಲೆನ್ಸ್ ಸಿಲುಕಿತ್ತು.
ಇದನ್ನೂ ಓದಿ: ಕಾಡಂದಿ ಮಾಂಸ ಬೇಯಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ದಾಳಿ: ಮೂವರ ಬಂಧನ
ನಂತರ ರೋಗಿ ಮತ್ತು ಸಂಬಂಧಿಕರನ್ನು ಆಟೋ ಮೂಲಕ ಮಂಡ್ಯಕ್ಕೆ ಕಳುಹಿಸಲಾಯಿತು. ಸಾರ್ವಜನಿಕರ ಸಹಾಯದಿಂದ ಹರಸಾಹಸಪಟ್ಟು ಆ್ಯಂಬುಲೆನ್ಸ್ ಅನ್ನು ಮೇಲಕ್ಕೆತ್ತಲಾಯಿತು. ಸುಮಾರು 40 ನಿಮಿಷಗಳ ಕಾಲ ಬೆಂಗಳೂರು-ಮೈಸೂರು ಹೈವೇ ಬಂದಾಗಿತ್ತು.