ಮಂಡ್ಯ: ರೆಬೆಲ್‌ಸ್ಟಾರ್ ಅಂಬಿ ಹುಟ್ಟು ಹಬ್ಬವನ್ನು ಗ್ರಾಮದ ಪ್ರತಿಯೊಂದು ಮನೆಗೂ ಲಾಡು ಹಂಚಿ ಅದ್ಧೂರಿಯಾಗಿ ಆಚರಣೆ ಮಾಡಿರುವ ಘಟನೆ ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ನಡೆದಿದೆ.
ಹಲ್ಲೇಗೆರೆ ಗ್ರಾಮಸ್ಥರು ಅಂಬಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 100 ಕೆ.ಜಿ ಲಾಡು ಖರೀದಿಸಿ ಗ್ರಾಮದ ಪ್ರತಿಮನೆಯ ಪ್ರತಿಯೊಬ್ಬ ವ್ಯಕ್ತಿಗೂ ಹಂಚಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಸುಮಲತಾ ಅಂಬರೀಶ್ ಗೆಲುವಿಗೂ ಕೇಕೆ ಹಾಕಿದ ಹಾಕಿ ಖುಷಿ ಪಟ್ಟ ಜನರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ರು.