ಮಂಡ್ಯ: ಸುಮಲತಾ ಅಂಬರೀಶ್‌ಗೆ ಅಭಿಮಾನಿಗಳ ಅಭಿಮಾನ ಹೆಚ್ಚಾಗುತ್ತಿದೆ. ಚುನಾವಣಾ ವೆಚ್ಚಕ್ಕಾಗಿ ಅಭಿಮಾನಿಯೊಬ್ಬ 5 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದ್ದಾನೆ.
ಮದ್ದೂರು ತಾಲೂಕಿನ ಶಿವಪುರ ಬಳಿ ಅಭಿಮಾನಿಯೊಬ್ಬ ಹಣವನ್ನು ಸುಮಲತಾ ಮಡಿಲಿಗೆ ಹಾಕೋ ಮೂಲಕ ತವರಿನ ಕಾಣಿಕೆ ನೀಡಿದ್ದಾರೆ. ಇಂದು ಮದ್ದೂರು ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಮಧ್ಯೆ ಅಭಿಮಾನಿ ನಂದೀಶ್ ಹಣವನ್ನು ನೀಡಿ ಅಭಿಮಾನ ತೋರಿದ್ದಾನೆ.
ಅಬ್ಬರದ ಪ್ರಚಾರ:ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸುಮಲತಾ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದರೆ, ಅತ್ತ ದರ್ಶನ್, ಯಶ್, ಅಭಿಷೇಕ್ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿದ್ದಾರೆ.