ETV Bharat / state

ಕೆಆರ್​ಎಸ್​​ ಹಿನ್ನೀರಿನಲ್ಲಿ ಅಕ್ರಮ ಮಣ್ಣು ಸಾಗಾಟ ಆರೋಪ: ಅಧಿಕಾರಿಗಳು ಹೇಳುವುದೇನು?

ಕೆಆರ್​ಎಸ್​​ ಹಿನ್ನೀರ ವ್ಯಾಪ್ತಿಯಲ್ಲಿ ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳ ಶಬ್ದ ದಿನ ದಿನಕ್ಕೆ ಹೆಚ್ಚುತ್ತಿದೆ.

ಅಕ್ರಮ ಮಣ್ಣು ಸಾಗಾಟ
ಅಕ್ರಮ ಮಣ್ಣು ಸಾಗಾಟ
author img

By

Published : Jun 26, 2023, 9:29 PM IST

Updated : Jun 26, 2023, 10:56 PM IST

ಕೆಆರ್​ಎಸ್​​ ಹಿನ್ನೀರಿನಲ್ಲಿ ಅಕ್ರಮ ಮಣ್ಣು ಸಾಗಾಟ

ಮಂಡ್ಯ : ಕನ್ನಡಿಗರ ಜೀವನಾಡಿ ಕೆಆರ್​ಎಸ್​ ಡ್ಯಾಂಗೆ ​ಇಷ್ಟು ದಿನ ಕಲ್ಲು ಗಣಿಗಾರಿಕೆಯಿಂದ ಆತಂಕ ಎದುರಾಗಿತ್ತು. ಇದೀಗ ಅಕ್ರಮ ಮಣ್ಣು ಸಾಗಾಟದಿಂದ ಅಪಾಯ ಎದುರಾಗಿದೆ. ಹಿನ್ನೀರಿನಲ್ಲಿ ಅಕ್ರಮ ಮಣ್ಣು ಸಾಗಾಟದ ಬಗ್ಗೆ ತಿಳಿದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈಗಾಗಲೇ ಮಳೆ ಇಲ್ಲದೇ ಡ್ಯಾಂ ಬರಿದಾಗುತ್ತಿದ್ದು, ನೀರಿಗಾಗಿ ಪರಿತಪಿಸುವ ಸಂದರ್ಭ ಬಂದೊದಗಿದೆ.

ಕೆಆರ್​ಎಸ್ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್ ಅಕ್ರಮ ಮಣ್ಣು ಸಾಗಾಟದ ಬಗ್ಗೆ ತಿಳಿಸಿದ್ದಾರೆ. ಹಿನ್ನೀರಿನಲ್ಲಿ ಹಿಂದೆ ಮರಳು ಮಾಫಿಯಾ ಮಾಡಿಕೊಂಡಿರುವ ರೀತಿಯಲ್ಲಿ ಈಗ ಮಣ್ಣು ಮಾಫಿಯಾ ಮಾಡಿಕೊಂಡಿದ್ದಾರೆ. ಮೈಸೂರು ಮತ್ತು ಮಂಡ್ಯ ಜಿಲ್ಲಾಡಳಿತ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬೇರೆಲ್ಲ ಸಂದರ್ಭದಲ್ಲಿ ಡ್ಯಾಂ ಉಳಿಸಿ, ಉಳಿಸಿ ಎಂದು ಹೇಳುತ್ತಾರೆ. ಈಗ ಡ್ಯಾಂ ಅಳಿಸಿ ಅಳಿಸಿ ಎಂದು ಹೇಳುತ್ತಿದ್ದು, ಸೆಕ್ಯುರಿಟಿ ಅಧಿಕಾರಿಗಳು ಹಾಗು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಕೂಡಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ : ಕೆಆರ್​ಎಸ್ ನೀರಿನ ಮಟ್ಟ 80 ಅಡಿಗೆ ಕುಸಿತ: ಶತಮಾನದ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಗೋಚರ

ಇಟ್ಟಿಗೆಗಳನ್ನು ಮಾಡಿ ಮಾರಾಟ ಮಾಡುವ ಸಲುವಾಗಿ ಇಲ್ಲಿ ಪ್ರತಿದಿನ ಟನ್‌ಗಳ ಲೆಕ್ಕದಲ್ಲಿ ಮಣ್ಣು ಸಾಗಾಟ ನಡೆಯುತ್ತಿದೆ. ಇದಕ್ಕೆ ಇಲ್ಲಿನ ಅಧಿಕಾರಿಗಳೇ ಪರೋಕ್ಷವಾಗಿ ಅವಕಾಶ ನೀಡುತ್ತಿದ್ದಾರೆ. ಇದು ಮೂಲ ನಿವಾಸಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ರೈತರಿಗೆ ಅಪಾರವಾಗಿ ಹಾನಿ ಉಂಟು ಮಾಡುತ್ತದೆ. ಡ್ಯಾಂನಲ್ಲಿ ನೀರು ನಿಲ್ಲುವುದಕ್ಕೆ ಅನುಕೂಲ ಮಾಡುವುದರ ಬದಲು ಭೂಮಿಯನ್ನು ಬಗೆದು ಸಮಸ್ಯೆಗಳು ಉಂಟಾಲು ಕಾರಣಕರ್ತರು ಆಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೇ ಇದ್ದರೆ ಕೆಆರ್​ಎಸ್​ ಗ್ರಾಮಸ್ಥರಿಂದ ಕೆಆರ್​ಎಸ್​ ಉಳಿಸಿ ಎಂಬ ಕಾರ್ಯಕ್ರಮ ಮಾಡುವ ಮೂಲಕ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ಕೊಟ್ಟರು.

ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಆನಂದ್ ಪ್ರತಿಕ್ರಿಯಿಸಿ, ಘಟನಾ ಸ್ಥಳಕ್ಕೆ ನಮ್ಮ ಎಲ್ಲ ಇಂಜಿನಿಯರ್ಸ್​​, ಪೊಲೀಸರು ಕೂಡಾ ಹೋಗಿದ್ದರು. ಆ ಕ್ಷಣಕ್ಕೆ ಯಾವ ಕ್ರಮ ತೆಗೆದುಕೊಳ್ಳಬಹುದೋ ಅದನ್ನು ತೆಗೆದುಕೊಂಡು ಅಕ್ರಮ ಮಣ್ಣು ಸಾಗಾಣಿಕೆ ನಿಲ್ಲಿಸಿದ್ದಾರೆ. ಇಂದು ಸಹ ಇದರ ಬಗ್ಗೆ ಕ್ರಮ ವಹಿಸಿಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ಮಾಡಿದ್ದಾರೆ. ನಮ್ಮ ಎಂಡಿ ಗಮನಕ್ಕೂ ಹೋಗಿದೆ. ಹೀಗಾಗಿ ಮುಂದೆ ಏನೆಲ್ಲ ಕಾನೂನು ಕ್ರಮ ವಹಿಸಬಹುದೋ ಅದನ್ನು ವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ : KRS Dam: ಬರಿದಾಗ್ತಿದೆ ಕೆ​ಆರ್​ಎಸ್ ಡ್ಯಾಂ; ಕುಡಿಯುವ ನೀರಿಗೆ ಹಾಹಾಕಾರದ ಮುನ್ಸೂಚನೆಯೇ?

Last Updated : Jun 26, 2023, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.