ETV Bharat / state

'ನಾನು ನಿತ್ಯ ಹೆಂಡ್ತಿ ಕೇಳಿಯೇ ಮನೆಯಿಂದ ಹೊರಬರ್ತೇನೆ..' ನಾರಾಯಣಗೌಡರು ಹೀಗೆ ಮಾಡಲು ಕಾರಣವೂ ಇದೆ.. - Rebel MLA reveal his Success Secret

ಕೆಆರ್‌ಪೇಟೆ ಕ್ಷೇತ್ರದ ರೆಬೆಲ್ ಶಾಸಕ ಕೆ ಸಿ ನಾರಾಯಣಗೌಡರ ಧರ್ಮಸ್ಥಳ ಸ್ವಾವಲಂಬಿ ಅಭಿವೃದ್ಧಿ ಸಂಸ್ಥೆ ಆಯೋಜನೆ ಮಾಡಿದ್ದ ಮದ್ಯವರ್ಜನೆ ಶಿಬಿರದಲ್ಲಿ ಪಾಲ್ಗೊಂಡು, ತಮ್ಮ ಸಕ್ಸಸ್ ಸೂತ್ರವನ್ನು ಹೊರ ಹಾಕಿದರು.

ಬೂಕನಕೆರೆಯಲ್ಲಿ ಮದ್ಯವರ್ಜನೆ ಶಿಬಿರ..ತಮ್ಮ ಸಕ್ಸಸ್ ಸಿಕ್ರೇಟ್ ಬಿಚ್ಚಿಟ್ಟ ರೆಬೆಲ್​ ಶಾಸಕ..!
author img

By

Published : Sep 28, 2019, 1:48 PM IST

ಮಂಡ್ಯ: ಕೆಆರ್‌ಪೇಟೆ ಕ್ಷೇತ್ರದ ರೆಬೆಲ್ ಶಾಸಕ ಕೆ ಸಿ ನಾರಾಯಣಗೌಡರ ಧರ್ಮಸ್ಥಳ ಸ್ವಾವಲಂಬಿ ಅಭಿವೃದ್ಧಿ ಸಂಸ್ಥೆ ಆಯೋಜನೆ ಮಾಡಿದ್ದ ಮದ್ಯವರ್ಜನೆ ಶಿಬಿರದಲ್ಲಿ ಪಾಲ್ಗೊಂಡು, ತಮ್ಮ ಸಕ್ಸಸ್ ಸೂತ್ರವನ್ನು ಹೊರ ಹಾಕಿದರು.

ಬೂಕನಕೆರೆಯಲ್ಲಿ ಮದ್ಯವರ್ಜನೆ ಶಿಬಿರ.. ತಮ್ಮ ಸಕ್ಸಸ್ ಸಿಕ್ರೇಟ್ ಬಿಚ್ಚಿಟ್ಟ ರೆಬೆಲ್​ ಶಾಸಕ..!

ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಧರ್ಮಸ್ಥಳ ಸ್ವಾವಲಂಬಿ ಅಭಿವೃದ್ಧಿ ಸಂಸ್ಥೆ ಆಯೋಜನೆ ಮಾಡಿದ್ದ ಮದ್ಯವರ್ಜನೆ ಶಿಬಿರದಲ್ಲಿ ಮಾತನಾಡಿದ ಅವರು, ಮದ್ಯವರ್ಜನೆ ಮಾಡಿದ 100ಕ್ಕೂ ಹೆಚ್ಚು ಮಂದಿಗೆ ಬುದ್ದಿಮಾತು ಹೇಳುವ ಸಂದರ್ಭದಲ್ಲಿ ತಮ್ಮ ಸೂತ್ರ ಹೊರ ಹಾಕಿದರು. ಯಾರೂ ಕೂಡ ನಿಮ್ಮ ಧರ್ಮಪತ್ನಿಯರ ಕಣ್ಣಲ್ಲಿ ಕಣ್ಣೀರು ಹಾಕಿಸಬೇಡಿ. ಹಾಕಿಸಿದ್ರೆ, ಶ್ರೇಯಸ್ಸು ಸಿಗುವುದಿಲ್ಲ. ನಾನೂ ಕೂಡ ಬೆಳಗ್ಗೆ ಎದ್ದು,ಪತ್ನಿಯ ಅಪ್ಪಣೆ ಪಡೆದು ಹೊರ ಬರುತ್ತೇನೆ. ನಾನೊಬ್ಬನೇ ಅಲ್ಲ, ಎಷ್ಟೋ ಮಂದಿ ಸಂಸದರು, ಶಾಸಕರು ಸೇರಿದಂತೆ ಸಾಧನೆ ಮಾಡಿದವರೆಲ್ಲಾ ಹೀಗೆನೇ.. ನೀವು ಕೂಡ ಮದ್ಯ ಸೇವನೆ ಬಿಟ್ಟು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಇನ್ನು, ಸಿಎಂ ಯಡಿಯೂರಪ್ಪ ತವರು ಗ್ರಾಮ ಬೂಕನಕೆರೆಯಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆಆರ್‌ಪೇಟೆ ಕೃಷ್ಣ ಹಾಗೂ ರೆಬೆಲ್ ಶಾಸಕ ನಾರಾಯಣಗೌಡ ಒಂದೇ ವೇದಿಕೆ ಹಂಚಿಕೊಂಡಿದ್ದರು.

Intro:ಮಂಡ್ಯ: ಉದ್ಯೋಗ ಹರಸಿ ಬಾಂಬೆಗೆ ಹೋದ ಕೆ.ಆರ್.ಪೇಟೆ ಕ್ಷೇತ್ರದ ರೆಬಲ್ ಶಾಸಕ ಕೆ.ಸಿ. ನಾರಾಯಣಗೌಡರ ಸಕ್ಸಸ್ ಸಿಕ್ರೇಟ್ ಸ್ವತಃ ಅವರೇ ಬಿಚ್ಚಿಟ್ಟಿದ್ದಾರೆ. ಧರ್ಮಸ್ಥಳ ಸ್ವಾವಲಂಬಿ ಅಭಿವೃದ್ಧಿ ಸಂಸ್ಥೆ ಆಯೋಜನೆ ಮಾಡಿದ್ದ ಮದ್ಯವರ್ಜನೆ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಸಕ್ಸಸ್ ಸೂತ್ರವನ್ನು ಹೊರ ಹಾಕಿದರು.

Body:ಮದ್ಯವರ್ಜನೆ ಮಾಡಿದ 100 ಕ್ಕೂ ಹೆಚ್ಚು ಮಂದಿಗೆ ಬುದ್ದಿಮಾತು ಹೇಳುವ ಸಂದರ್ಭದಲ್ಲಿ ತಮ್ಮ ಸೂತ್ರ ಹೊರ ಹಾಕಿದರು. ಯಾರೂ ಕೂಡ ನಿಮ್ಮ ಧರ್ಮಪತ್ನಿಯರ ಕಣ್ಣಲ್ಲಿ ಕಣ್ಣೀರು ಹಾಕಿಸಬೇಡಿ. ಹಾಕಿಸಿದರೆ ಶ್ರೇಯಸ್ಸು ಸಿಗುವುದಿಲ್ಲ. ನಾನೂ ಕೂಡ ಬೆಳಗ್ಗೆ ಎದ್ದು ತಮ್ಮ ಪತ್ನಿಯ ಅಪ್ಪಣೆ ಪಡೆದು ಹೊರ ಬರುತ್ತೇನೆ. ನಾನೋಬ್ಬನೇ ಅಲ್ಲ ಎಷ್ಟೋ ಮಂದಿ ಸಂಸದರು, ಶಾಸಕರು ಸೇರಿದಂತೆ ಸಾಧನೆ ಮಾಡಿದವರೆಲ್ಲಾ ಹೀಗೆನೇ ಎಂದು ಹೇಳಿದರು.
ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಹೀಗೆ ತಮ್ಮ ಸಕ್ಸಸ್ ಹಿಂದಿನ ಕಥೆಯನ್ನು ಬಿಚ್ಚಿಟ್ಟರು. ನೀವು ಕೂಡ ಮದ್ಯ ಸೇವನೆ ಬಿಟ್ಟು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಒಂದೇ ವೇದಿಕೆ ಹಂಚಿಕೊಂಡ ಮಾಜಿ ಸ್ಪೀಕರ್-ರೆಬೆಲ್ ಶಾಸಕ: ಸಿಎಂ ಯಡಿಯೂರಪ್ಪ ತವರು ಗ್ರಾಮ ಬೂಕನಕೆರೆಯಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಹಾಗೂ ರೆಬಲ್ ಶಾಸಕ ನಾರಾಯಣಗೌಡ ಒಂದೇ ವೇದಿಕೆ ಹಂಚಿಕೊಂಡಿದ್ದರು.
ಮಾಜಿ ಸ್ಪೀಕರ್ ಕೃಷ್ಣ ಅವರು ಜೆಡಿಎಸ್‌ನಲ್ಲಿದ್ದು ಎಚ್.ಡಿ.ಕೆ ಜೊತೆ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗಷ್ಟೇ ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗೆ ಉಪ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿ ಮನೆಗೆ ಹೋಗಿ ಭೇಟಿ ಮಾಡಿದ್ದರು. ಆದರೆ ಇವರ ಈ ಅಚಾನಕ್ ಭೇಟಿ ಅಚ್ಚರಿ ಮೂಡಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.