ETV Bharat / state

ಕೃಷಿ ಕಾಯ್ದೆಗಳು ರೈತ ವಿರೋಧಿ.. ಕೂಡಲೇ ರದ್ದುಪಡಿಸಿ.. ಡಾ. ಹೆಚ್.ಎನ್.ರವೀಂದ್ರ - HN Ravindra outrage against agriculture act

ನಾವು ಬುದ್ದಿವಂತರು ಎಂದು ಜನಪ್ರತಿನಿಧಿಗಳು ಅಂದುಕೊಂಡ್ರೆ, ಮುಂದೆ ಜನರೇ ಉತ್ತರ ಕೊಡ್ತಾರೆ. ಜಿಲ್ಲೆಯಲ್ಲಿ ಶೇ. 90ರಷ್ಟು ರೈತರು ಇದ್ದಾರೆ ಎಂದು ಎಚ್ಚರಿಸಿದರು..

agricultural-acts-are-anti-farmer-dr-h-n-ravindra
ಡಾ. ಹೆಚ್.ಎನ್.ರವೀಂದ್ರ ಮಾತನಾಡಿದರು
author img

By

Published : Jan 26, 2021, 8:59 PM IST

ಮಂಡ್ಯ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ. ಅವುಗಳನ್ನು ರದ್ದುಪಡಿಸಬೇಕು ಎಂದು ರೈತ ಹೋರಾಟಗಾರ ಡಾ. ಹೆಚ್ ಎನ್ ರವೀಂದ್ರ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದ ಬೃಹತ್ ಟ್ರ್ಯಾಕ್ಟರ್ ರ್ಯಾಲಿಗೆ ಪೊಲೀಸರು ತಡೆ ಹಿಡಿದಿದ್ದಾರೆ. ಆದರೂ, ರೈತರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ತಕ್ಷಣವೇ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಡಾ. ಹೆಚ್.ಎನ್.ರವೀಂದ್ರ ಮಾತನಾಡಿದರು

ಮೈಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣಕ್ಕೆ ಮುಂದಾಗಿದ್ದಾರೆ. ನಾವು ಬುದ್ದಿವಂತರು ಎಂದು ಜನಪ್ರತಿನಿಧಿಗಳು ಅಂದುಕೊಂಡ್ರೆ, ಮುಂದೆ ಜನರೇ ಉತ್ತರ ಕೊಡ್ತಾರೆ. ಜಿಲ್ಲೆಯಲ್ಲಿ ಶೇ. 90ರಷ್ಟು ರೈತರು ಇದ್ದಾರೆ ಎಂದು ಎಚ್ಚರಿಸಿದರು.

ಮನವಿ ಎಂಬ ಪದಕ್ಕೆ ಅರ್ಥವಿಲ್ಲ. ಪದೇಪದೆ ಸಚಿವರು, ಸಂಸದರಿಗೆ ಮನವಿ ಕೊಟ್ಟಿದ್ದೇವೆ. ಎಲ್ಲರೂ ಸಹ ನಾಲಾಯಕಗಳ ರೀತಿ ವರ್ತಿಸುತ್ತಿದ್ದಾರೆ. ಏನು ಮಾಡುವುದಕ್ಕೆ ಸಾಧ್ಯ ಆಗುತ್ತೆ?. ರೈತರು ದಂಗೆ ಏಳುತ್ತಾರೆ. ಇನ್ನು ಮುಂದೆ ಯಾರಿಗೂ ಮನವಿ ಕೊಡುವುದಿಲ್ಲ ಎಂದರು.

ಓದಿ: ಕೃಷಿ ಸಚಿವ ಬಿ ಸಿ ಪಾಟೀಲ್​ ಹೇಳ್ತಾರೆ.. ದಿಲ್ಲಿಯಲ್ಲಿ ಪ್ರತಿಭಟಿಸುತ್ತಿರೋರು ರೈತರಲ್ವಂತೆ, ಭಯೋತ್ಪಾದಕರಂತೆ..

ಸಂಸದೆ ಸುಮಲತಾ ಅಂಬರೀಶ್ ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ವಹಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಸದರು ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಇಲ್ಲಿ ಎಲ್ಲರು ಸಹ ಬುದ್ದಿವಂತರೇ.. ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು.

ಮೂಗು ಹಿಡಿದು ಬಾಯಿ ಬಿಡಿಸುವ ಕೆಲಸ ಮಾಡ್ತಿದ್ದಾರೆ. ಜಿಲ್ಲೆಯ ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಸಂಸದೆ ವಿರುದ್ದ ಡಾ.ಹೆಚ್.ಎನ್‌.ರವಿಂದ್ರ ಸಿಡಿದೆದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.