ETV Bharat / state

ಮತ ಬೇಟೆ ಆರಂಭಿಸಿದ ನಟಿ ಸುಮಲತಾ: ಆರತಿ ಮಾಡಿ ಸ್ವಾಗತಿಸಿದ ಅಭಿಮಾನಿಗಳು - Actress Sumalatha

ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ನಟಿ ಸುಮಲತಾ ಜಿಲ್ಲೆಯಲ್ಲಿ ಮತ ಬೇಟೆ ಆರಂಭ ಮಾಡಿದ್ದಾರೆ‌. ಜಿಲ್ಲೆಯ ಜನತೆ ಸೇರಿದಂತೆ ಸ್ಯಾಂಡಲ್​ವುಡ್​ನ ತಾರಾ ಬಳಗವೂ ಇವರ ಹಿಂದಿದೆ ಎನ್ನಲಾಗುತ್ತಿದೆ.

ನಟಿ ಸುಮಲತಾ ಅಂಬರೀಶ್
author img

By

Published : Mar 11, 2019, 5:58 PM IST

Updated : Mar 11, 2019, 7:34 PM IST

ಮಂಡ್ಯ: ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದೆ‌. ನಟಿ ಸುಮಲತಾ ಅಧಿಕೃತವಾಗಿ ಸ್ಪರ್ಧೆ ಘೋಷಣೆ ಮಾಡದೇ ಇದ್ದರೂ ಜಿಲ್ಲೆಯಲ್ಲಿ ಮತ ಬೇಟೆ ಆರಂಭ ಮಾಡಿದ್ದಾರೆ‌. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು, ಮಹಿಳೆಯರು ಆರತಿ ಮಾಡಿ ಸ್ವಾಗತ ಮಾಡುತ್ತಿದ್ದಾರೆ‌.

ಮತ ಭೇಟೆ ಆರಂಭ ಮಾಡಿದ ನಟಿ ಸುಮಲತಾ

ಊಹಾಪೋಹಕ್ಕೆ ಬೆಲೆ ಕೊಡಬೇಡಿ:

ನನ್ನ ವಿರುದ್ಧ ಬರುವ ಊಹಾಪೋಹಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಹೀಗಾಗಿ ಅಧಿಕೃತ ಫೇಸ್​​ಬುಕ್‌ ಖಾತೆ ತೆರೆದಿದ್ದೇನೆ. ಅದರಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ ಅಂತ ಹೇಳಿದರು.

ಮದರ್ ಇಂಡಿಯಾ ಅಂತಾರೆ ದರ್ಶನ್:

ನನ್ನನ್ನು ದರ್ಶನ್ ಮದರ್ ಇಂಡಿಯಾ ಅಂತ ಕರೆಯುತ್ತಾರೆ. ಚುನಾವಣೆ ಬಗ್ಗೆ ಅವರು ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಶೀಘ್ರವೇ ಪ್ರಚಾರಕ್ಕೆ ಬರಲಿದ್ದಾರೆ. ಇವರಲ್ಲದೆ ಸ್ಯಾಂಡಲ್‌ವುಡ್​ನ ಇತರೆ ಕಲಾವಿದರು ಸಹ ಬೆಂಬಲ ನೀಡುತ್ತಿದ್ದಾರೆ ಎಂದರು.

ಕುಮಾರಸ್ವಾಮಿ ನೋಟು, ಸುಮಲತಾಗೆ ವೋಟು:

ಇನ್ನು ಸುಮಲತಾ ಅಭಿಮಾನಿಗಳು ವಿಶಿಷ್ಟವಾಗಿ ಪ್ರಚಾರ ಆರಂಭ ಮಾಡಿದ್ದಾರೆ. ಕುಮಾರಸ್ವಾಮಿ ನೋಟು, ಸುಮಲತಾಗೆ ವೋಟು ಅಂತ ಹೇಳಿಕೊಂಡು ಪ್ರಚಾರ ಆರಂಭ ಮಾಡಿದ್ದಾರೆ. ಪ್ರತಿ ಹಳ್ಳಿಗೂ ಹೋಗುತ್ತಿರುವ ಅಭಿಮಾನಿಗಳು ಹೀಗೆ ವಿಶಿಷ್ವವಾಗಿ ಪ್ರಚಾರ ಮಾಡುತ್ತಿದ್ದಾರೆ. ನಮಗೆ ಸ್ಥಳೀಯರು ಬೇಕು ದೂರದ ಹಾಸನದವರು ಬೇಡ ಎಂದು ಒತ್ತಾಯ ಮಾಡಿದ್ದಾರೆ.

Intro:ಮಂಡ್ಯ: ಚುನಾವಣೆ ಕಾವು ರಂಗೇರುತ್ತಿದೆ‌. ಸುಮಲತಾ ಮತ ಭೇಟೆ ಆರಂಭ ಮಾಡಿದ್ದಾರೆ‌. ಅಧಿಕೃತವಾಗಿ ಸ್ಪರ್ಧೆ ಘೋಷಣೆ ಮಾಡದೇ ಇದ್ದರೂ ಪ್ರಚಾರ ಶುರು ಮಾಡಿದ್ದಾರೆ‌. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು, ಮಹಿಳೆಯರು ಆರತಿ ಮಾಡಿ ಸ್ವಾಗತ ಮಾಡುತ್ತಿದ್ದಾರೆ‌.

Body:ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ, ನಾಗತೀಹಳ್ಳಿ, ತೊಂಡೇಹಳ್ಳಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಗ್ರಾಮಗಳ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಜನರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಹೋದಕಡೆ ಮತದಾರರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

18ರೊಳಗೆ ಅಧಿಕೃತ ಘೋಷಣೆ: ಮಾರ್ಚ್ 18 ರೊಳಗೆ ಅಧಿಕೃತ ಘೋಷಣೆ ಮೂಲಕ ಚುನಾವಣಾ ಅಖಾಡಕ್ಕೆ ದುಮುಕುವುದಾಗಿ ನಟಿ ಸುಮಲತಾ ಅಂಬರೀಶ್ ಹೇಳಿದರು.
ಮತದಾರರ ಅಭಿಪ್ರಾಯ ಸಂಗ್ರಹ ನಡೆಸಲಾಗುತ್ತಿದೆ. ಶೀಘ್ರವೇ ನಿಮ್ಮಗಳ ಮುಂದೆಯೇ ಘೋಷಣೆ ಮಾಡುವೆ. ಕಾಂಗ್ರೆಸ್ ನಿರ್ಧಾರಕ್ಕಾಗಿ ಕೊನೆವರೆಗೂ ಕಾಯುವೆ. ಹಿಂದೆ ಸರಿಯುವಂತೆ ಯಾವುದೇ ಒತ್ತಡವಿಲ್ಲ. ಈ ಹಿಂದೆ ಡಿ.ಕೆ.ಶಿವಕುಮಾರ್ ಸಂಪರ್ಕ ಮಾಡಿ ಸಲಹೆ ನೀಡಿದ್ದರು. ಅವರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇ ಎಂದರು.

ಊಹಾಪೋಹಕ್ಕೆ ಬೆಲೆ ಕೊಡಬೇಡಿ: ನನ್ನ ವಿರುದ್ಧ ಬರುವ ಊಹಾಪೋಹಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಹೀಗಾಗಿ ಅಧಿಕೃತ ಫೇಸ್‌ಬುಕ್‌ ಖಾತೆ ತೆರೆದಿದ್ದೇನೆ. ಅದರಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ ಅಂತ ಹೇಳಿದರು.

ಮದರ್ ಇಂಡಿಯಾ ಅಂತಾರೆ ದರ್ಶನ್: ನನ್ನನ್ನು ದರ್ಶನ್ ಮದರ್ ಇಂಡಿಯಾ ಅಂತ ಕರೆಯೋದು‌. ಅವರು ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಪ್ಲಾನ್ ರೂಪಿಸಿದ್ದು ಶೀಘ್ರವೇ ಪ್ರಚಾರಕ್ಕೆ ಬರಲಿದ್ದಾರೆ ಎಂದರು.
ಸ್ಯಾಂಡಲ್‌ವುಡ್ ಮಂದಿ ಬೆಂಬಲ ನೀಡುತ್ತಾರೆ. ಯಾವುದೇ ಭಯ ಬೇಡ. ಪ್ಲಾನ್ ರೀತಿಯೇ ಪ್ರಚಾರ ಮಾಡಲಾಗುತ್ತದೆ. ದರ್ಶನ್ ಬರುತ್ತಾರೆ ಎಂದರು.

ಕುಮಾರಸ್ವಾಮಿ ನೋಟು, ಸುಮಲತಾಗೆ ಓಟು: ಸುಮಲತಾ ಅಭಿಮಾನಿಗಳು ವಿಶಿಷ್ಟವಾಗಿ ಪ್ರಚಾರ ಆರಂಭ ಮಾಡಿದ್ದಾರೆ. ಕುಮಾರಸ್ವಾಮಿ ನೋಟು, ಸುಮಲತಾಗೆ ಓಟು ಅಂತ ಹೇಳಿಕೊಂಡು ಪ್ರಚಾರ ಆರಂಭ ಮಾಡಿದ್ದಾರೆ.
ಪ್ರತಿ ಹಳ್ಳಿಗೂ ಹೋಗುತ್ತಿರುವ ಅಭಿಮಾನಿಗಳು ಹೀಗೆ ವಿಶಿಷ್ಠವಾಗಿ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಸ್ಥಳೀಯತೆಯ ಪ್ರಶ್ನೆ ಎತ್ತಿದ್ದಾರೆ. ದೂರದ ಹಾಸನದವರು ಬೇಡ. ಸ್ಥಳೀಯರು ಬೇಕು ಎಂದು ಒತ್ತಾಯ ಮಾಡಿದ್ದಾರೆ.

Conclusion:
Last Updated : Mar 11, 2019, 7:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.