ETV Bharat / state

ಸ್ನೇಹಿತ ಹಾಗೂ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ.. ಡಿ ಬಾಸ್​​ಗೆ ಅಭಿಮಾನಿಗಳ ಜೈಕಾರ - election news 2023

ಸ್ಯಾಂಡಲ್​ವುಡ್​​ ನಟ ದರ್ಶನ್​ ಇಂದು ಪರ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಪರ ಪ್ರಚಾರ ನಡೆಸಿದರು.

actor-darshan-election-campaign-for-bjp-candidate
ಸ್ನೇಹಿತ ಹಾಗೂ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ, ಡಿ ಬಾಸ್​​ಗೆ ಜೈಕಾರ ಹಾಕಿದ ಅಭಿಮಾನಿಗಳು
author img

By

Published : Apr 27, 2023, 3:57 PM IST

ಸ್ನೇಹಿತ ಹಾಗೂ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ

ಮಂಡ್ಯ: ನಟ ದರ್ಶನ್ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸ್ನೇಹಿತರಾದ ಸಚ್ಚಿದಾನಂದ ಪರ ಕ್ಷೇತ್ರದ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ನೆಚ್ಚಿನ ನಟನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರಿದ್ದು, ದರ್ಶನ್​ ಅವರಿಗೆ ಜೈಕಾರ ಹಾಕಿದರು.

ರಾಜ್ಯದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಈಗ ಚುನಾವಣಾ ಕಣದಲ್ಲಿ ತಮ್ಮ ಸ್ನೇಹಿತರ ಪರವಾಗಿ ಹಲವಾರು ಸಿನಿಮಾ ನಟರು ಪ್ರಚಾರ ಕೈಗೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸ್ನೇಹಿತ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಪರ ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ನಟ ದರ್ಶನ್ ಇಂಡುವಾಳು ಸಚ್ಚಿದಾನಂದ ಪರವಾಗಿ ತಾಲ್ಲೂಕಿನ ಕೆಆರ್​​ಎಸ್, ಬೆಳಗೋಳ, ಮಹದೇವಪುರ, ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಡಿ ಬಾಸ್ ಚುನಾವಣಾ ಪ್ರಚಾರ ನಡೆಸಿದರು. ನಟ ದರ್ಶನ್ ಅವರನ್ನು ನೋಡಲು ರಸ್ತೆಯ ಎರಡು ಬದಿಗಳಲ್ಲಿ ಹಾಗೂ ರಸ್ತೆಯ ಮಧ್ಯದಲ್ಲಿ ಗ್ರಾಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅದರಲ್ಲಿ ಯುವಕರೇ ಹೆಚ್ಚಾಗಿದ್ದು, ದರ್ಶನ್​ಗೆ ಜೈಕಾರ ಹಾಕಿದರು. ಚುನಾವಣಾ ಪ್ರಚಾರದಲ್ಲಿ ದರ್ಶನ್ ಸ್ನೇಹಿತನನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದು, ಅವರ ಅಭಿಮಾನಿಗಳು ಬೃಹತ್ ಹಾರ ಹಾಕಿ ಹಾಗೂ ಪಟಾಕಿ ಸಿಡಿಸಿದರು.

ಇದನ್ನೂ ಓದಿ: ಹೆಬ್ಬುಲಿಯ​ ಅಬ್ಬರದ ಪ್ರಚಾರ: ಅಭಿಮಾನಿಗಳ ಘೋಷಣೆಗಳ ನಡುವೆ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.