ಮಂಡ್ಯ: ವಾರೆಂಟ್ ಜಾರಿಗೆ ಲಂಚಕ್ಕೆ ಬೇಡಿಕೆಯಿಟ್ಟ ಹೆಡ್ ಕಾನ್ಸ್ಟೇಬಲ್ ಎಸಿಬಿ ಅಧಿಕಾರಿಗಳ ಖೆಡ್ಡಕ್ಕೆ ಬಿದ್ದ ಘಟನೆ ಮದ್ದೂರು ಪಟ್ಟಣದ ಜೆಎಂಎಫ್ಸಿ ಕೋರ್ಟ್ ಆವರಣದಲ್ಲಿ ನಡೆದಿದೆ. ಶ್ರೀಕಾಂತ್ ಎಂಬುವವರೇ ಆರೋಪಿತ ಪೊಲೀಸ್ ಕಾನ್ಸ್ಟೇಬಲ್. ಮದ್ದೂರು ಪಟ್ಟಣದ ಜೆಎಂಎಫ್ಸಿ ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ. ಕೋರ್ಟ್ ಹೊರಡಿಸಿದ್ದ ಬಂಧನರಹಿತ ವಾರಂಟ್ ಜಾರಿಗೊಳಿಸಲು ವ್ಯಕ್ತಿಯೋರ್ವನಿಂದ ಇವರು 1,500 ರೂ ಲಂಚ ಸ್ವೀಕರಿಸುತ್ತಿದ್ದರು. ಡಿವೈಎಸ್ಪಿ ಮಾಥ್ಯೂ ಥಾಮಸ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಇದನ್ನೂ ಓದಿ: ಮೀಸಲು ಸೌಲಭ್ಯ ಹೆಚ್ಚಳಕ್ಕೆ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಧರಣಿ.. ಮನವೊಲಿಸಿದ ಹೆಚ್ಡಿಕೆ